ETV Bharat / state

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಾಯುವ್ಯ ಸಾರಿಗೆ ಸಂಸ್ಥೆ: ಆಸ್ತಿ ಒತ್ತೆ ಇಡಲು ಮುಂದಾದ ಅಧಿಕಾರಿಗಳು!

ರಾಜ್ಯ ಕಂಡ ಅತಿ ದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗ ಅಪಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ಇದೇ ಸಾರಿಗೆ ಸಂಸ್ಥೆ ತನ್ನ ಆಸ್ತಿಯನ್ನು ಅಡವಿಟ್ಟು ಒಂದು ವರ್ಷದ ಹಿಂದೆ ಅಷ್ಟೇ 200 ಕೋಟಿ ಸಾಲ ಪಡೆದಿತ್ತು. ಈ ಸಾಲದ ಹೊರೆ ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ವಾಯುವ್ಯ ಸಾರಿಗೆ ಸಂಸ್ಥೆ ಮತ್ತೆ 300 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಾಯುವ್ಯ ಸಾರಿಗೆ ಸಂಸ್ಥೆ

author img

By

Published : Feb 3, 2022, 4:52 PM IST

Updated : Feb 3, 2022, 5:17 PM IST

ಹುಬ್ಬಳ್ಳಿ: ಇದು ರಾಜ್ಯದಲ್ಲಿನ ಪ್ರತಿಷ್ಠಿತ ಸಾರಿಗೆ ಸಂಸ್ಥೆ. ನಿತ್ಯ ಸಾವಿರಾರು ಜನರನ್ನು ಹೊತ್ತೊಯ್ದು ಸುರಕ್ಷಿತವಾಗಿ ಅವರವರ ಸ್ಥಳಗಳಿಗೆ ತಲುಪಿಸುವ ನಿಗಮ. ಆದರೆ, ಈ ಸಂಸ್ಥೆ ಇದೀಗ ಹಿಂದೆಂದಿಗಿಂತಲೂ ಅನುಭವಿಸಲಾರದ ನಷ್ಟ ಅನುಭವಿಸುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು, ಸಂಸ್ಥೆ ಮತ್ತೆ ತನ್ನ ಆಸ್ತಿಯನ್ನು ಒತ್ತೆ ಇಟ್ಟು, ಸಾಲ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯ ಕಂಡ ಅತಿ ದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗ ಅಪಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ಇದೇ ಸಾರಿಗೆ ಸಂಸ್ಥೆ ತನ್ನ ಆಸ್ತಿಯನ್ನು ಅಡವಿಟ್ಟು ಒಂದು ವರ್ಷದ ಹಿಂದೆ ಅಷ್ಟೇ 200 ಕೋಟಿ ರೂಪಾಯಿ ಸಾಲ ಪಡೆದಿತ್ತು. ಈ ಸಾಲದ ಹೊರೆ ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ವಾಯುವ್ಯ ಸಾರಿಗೆ ಸಂಸ್ಥೆ ಮತ್ತೆ 300 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ. ಈ ಸಂಸ್ಥೆ ನಿತ್ಯ ಸಾವಿರಾರು ಬಸ್ಸುಗಳ ಮೂಲಕ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ. ಆದರೆ ಕೊರೊನಾ ಹೆಮ್ಮಾರಿಯಿಂದ ವಾ.ಕ.ರ.ಸಾ ಸಂಸ್ಥೆ ನೂರಾರು ಕೋಟಿ ನಷ್ಟ ಅನುಭವಿಸುತ್ತಿದೆ.

ಆಸ್ತಿ ಒತ್ತೆ ಇಡಲು ಮುಂದಾದ ಅಧಿಕಾರಿಗಳು!

ಪರಿಣಾಮವಾಗಿ ತಮ್ಮ ಸಿಬ್ಬಂದಿಗೆ ತಿಂಗಳ ವೇತನ ನೀಡಲು ಪರದಾಡುತ್ತಿದೆ. ಬ್ಯಾಂಕ್ ನಿಂದ 300 ಕೋಟಿ ಸಾಲ ಪಡೆಯಲು ಮುಂದಾಗಿದ್ದು, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಕಚೇರಿ, ಹೊಸ ಬಸ್ ನಿಲ್ದಾಣ ಹಾಗೂ ಪ್ರಾದೇಶಿಕ ಕಾರ್ಯಾಗಾರ ಸೇರಿದಂತೆ ಒಟ್ಟು 10 ಪ್ರಮುಖ ಆಸ್ತಿಗಳನ್ನು ಒತ್ತೆ ಇಟ್ಟು 7 ವರ್ಷಗಳ ಅವಧಿಗೆ ಸಾಲ ಪಡೆಯಲಿದೆಯಂತೆ.

ಈ ಸಂಬಂಧ ಸರ್ಕಾರ ಸಾಲ ಪಡೆದುಕೊಳ್ಳಲು ಗ್ರೀನ್ ಸಿಗ್ನಲ್ ‌ನೀಡಿದೆ. 2019 ಅಕ್ಟೋಬರ್ ನಿಂದ 2022 ರ ಜನವರಿವರೆಗೆ ನಿವೃತ್ತಿ ಹೊಂದಿರುವ 1703 ಸಿಬ್ಬಂದಿಗೆ ಒಟ್ಟು 170 ಕೋಟಿ ರೂ. ನೀಡಬೇಕಿದೆ. ಇದೇ ರೀತಿ ಪಿ ಎಫ್​ ಹಣ ಕೂಡ 421 ಕೋಟಿ ರೂ. ತಲುಪಿದೆ. ಆದ್ದರಿಂದ ಸಾಲ ಅನಿವಾರ್ಯ ಎನ್ನಲಾಗ್ತಿದೆ. ಇದರಿಂದ ಸರ್ಕಾರ ಸಂಸ್ಥೆಗೆ ಹಣ ಬಿಡಗಡೆ ಮಾಡುವುದನ್ನ ಬಿಟ್ಟು ಸಾಲ ಪಡೆಯಲು ಅನುಮತಿ ‌ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಇದನ್ನೂ ಓದಿ: ಸಾರಿಗೆ ನಿಗಮಗಳು ನಷ್ಟದಿಂದ ಪಾರಾಗಲು ಹೊಸ ಪ್ಲಾನ್ : ಸಮಿತಿ ರಚಿಸಿ ವರದಿ ನೀಡಲು ಸಿಎಂ ಸೂಚನೆ

ವಾಯುವ್ಯ ಸಾರಿಗೆ ಸಂಸ್ಥೆ ದಿನದಿಂದ ದಿನಕ್ಕೆ ಸಾಲ ಮಾಡಿ ಸಿಬ್ಬಂದಿಗೆ ವೇತನ ನೀಡುತ್ತಿದೆ. ಇಲ್ಲಿಯವರೆಗೂ ಆಸ್ತಿ ಅಡವಿಟ್ಟು 500 ಕೋಟಿ ಸಾಲ ಮಾಡಿದೆ. ಇದೇ ರೀತಿ ಸಂಸ್ಥೆ ನಷ್ಟದಲ್ಲಿ ಮುಂದುವರೆದರೆ ಸಂಸ್ಥೆಯನ್ನು ಮಾರುವ ಸ್ಥಿತಿಗೆ ಬಂದ್ರೂ ಬರಬಹುದು. ಆದ್ದರಿಂದ ಸರ್ಕಾರ ಸಂಸ್ಥೆಗೆ ಹಣ ನೀಡಿ ಸಾಲದಿಂದ ಮುಕ್ತಿ ನೀಡಬೇಕಾಗಿದೆ ಎನ್ನುವುದು ಸ್ಥಳೀಯರ ಆಗ್ರಹ.

Last Updated : Feb 3, 2022, 5:17 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.