ETV Bharat / state

ಕಿಮ್ಸ್​ ಸಿಬ್ಬಂದಿ ವಸತಿ ನಿಲಯದ ಅವ್ಯವಸ್ಥೆ: ರೋಗ ಹರಡುವ ಭೀತಿಯಲ್ಲಿ ಕುಟುಂಬಸ್ಥರು - ಕಿಮ್ಸ್​ ಆಸ್ಪತ್ರೆ ಸಿಬ್ಬಂದಿ ವಸತಿ ನಿಲಯದ ಸುದ್ದಿ

ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ವಾಸಿಸುವ ವಸತಿ ಸಂಖ್ಯೆ 7 ರಲ್ಲಿ ವಾಸಿಸುವ ಸಿಬ್ಬಂದಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕಿಮ್ಸ್​ ಸಿಬ್ಬಂದಿ ವಸತಿ ನಿಲಯದ ಅವ್ಯವಸ್ಥೆ
ಕಿಮ್ಸ್​ ಸಿಬ್ಬಂದಿ ವಸತಿ ನಿಲಯದ ಅವ್ಯವಸ್ಥೆ
author img

By

Published : Oct 14, 2020, 5:15 PM IST

ಹುಬ್ಬಳ್ಳಿ: ಕಿಮ್ಸ್​ ಸದಾಕಾಲ ಒಂದಲ್ಲೊಂದು ಯಡವಟ್ಟುಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳು ತಮ್ಮ ಜೀವನದ ಹಂಗು ತೊರೆದು ರೋಗಿಗಳ‌ ಸೇವೆ ಮಾಡುತ್ತಾರೆ. ಆದರೆ ಅವರ ಮನೆಗಳ ಮಾತ್ರ ಯಾರಿಗೂ ಬೇಡವಾಗಿದೆ.

ಕಿಮ್ಸ್​ ಸಿಬ್ಬಂದಿ ವಸತಿ ನಿಲಯದ ಅವ್ಯವಸ್ಥೆ

ಎಲ್ಲೆಂದರಲ್ಲಿ ಬಿದ್ದಿರುವ ಕಸ, ದುರ್ವಾಸನೆಯಿಂದ ಕೂಡಿದ ಕೊರೊನಾ ವಾರಿಯರ್ ವಸತಿಗಳ ಆವರಣ ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಕಿಮ್ಸ್ ಆವರಣದ ದೀಪಾ ಹಾಸ್ಟೆಲ್ ಪಕ್ಕದ ವಸತಿ ಸಂಖ್ಯೆ 7 ರಲ್ಲಿ ವಾಸಿಸುವ ಸಿಬ್ಬಂದಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಸ್ವಚ್ಛತೆ ಎಂಬುದು ಇಲ್ಲಿ ಮರಿಚಿಕೆಯಾಗಿದ್ದು, ಕುಡಿಯುವ ನೀರು ಸಹ ಕಲುಷಿತವಾಗಿದೆ. ಹಾವು, ಹಂದಿ, ಬಿಡಾಡಿ ದನಗಳು ಮತ್ತು ಹೆಗ್ಗಣಗಳ ಕಾಟ ಹೆಚ್ಚಾಗಿದೆ. ಅಲ್ಲದೆ ಮನೆಯ ಮೇಲ್ಛಾವಣಿ ಸೋರುತ್ತಿದ್ದರು ಆಡಳಿತ ಮಂಡಳಿ‌ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಹಲವು ರೋಗಗಳ ಭೀತಿ ಎದುರಾಗಿದೆ. ಕೂಡಲೇ ಆಡಳಿತ ಮಂಡಳಿ ಎಚ್ಚೆತ್ತುಕೊಂಡ ಕಿಮ್ಸ್ ಸಿಬ್ಬಂದಿಗಳು ಹಾಗೂ ಕೊರೊನಾ ವಾರಿಯರ್ಸ್‌ ಕುಟುಂಬದ ಹಿತಾಸಕ್ತಿ ಕಾಪಾಡಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.