ETV Bharat / state

ನೂತನ‌ ಅಣ್ಣಿಗೇರಿ ತಾಲೂಕು ಪಂಚಾಯತ್ ಜೆಡಿಎಸ್ ತೆಕ್ಕೆಗೆ - Hubli Darwada latest news

ಅಧ್ಯಕ್ಷರಾಗಿ ಇಬ್ರಾಹಿಂಪೂರ ತಾಲೂಕು ಪಂಚಾಯತ್ ಸದಸ್ಯ ಮಲ್ಲರಡ್ಡಿ ಕುರಹಟ್ಟಿ ಹಾಗೂ ಉಪಾಧ್ಯಕ್ಷರಾಗಿ ಭದ್ರಾಪೂರ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ನಿರ್ಮಲಾ ಹನಮಂತ ಗಾಣಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Annigeri taluk panchayat
Annigeri taluk panchayat
author img

By

Published : Aug 18, 2020, 7:10 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ನೂತನ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಎರಡೂ ಸ್ಥಾನಗಳೂ ಸಹ ಜೆಡಿಎಸ್ ಪಕ್ಷದ ಪಾಲಾಗಿವೆ.

ಅಧ್ಯಕ್ಷರಾಗಿ ಇಬ್ರಾಹಿಂಪೂರ ತಾಲೂಕು ಪಂಚಾಯತ್ ಸದಸ್ಯ ಮಲ್ಲರಡ್ಡಿ ಕುರಹಟ್ಟಿ ಅಯ್ಕೆಯಾದರು.

Mallaraddi kurahatti
ಮಲ್ಲರಡ್ಡಿ ಕುರಹಟ್ಟಿ

ಉಪಾಧ್ಯಕ್ಷರಾಗಿ ಭದ್ರಾಪೂರ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ನಿರ್ಮಲಾ ಹನಮಂತ ಗಾಣಿಗೇರ ಕೂಡಾ ಅವಿರೋಧ ಆಯ್ಕೆಯಾಗಿದ್ದಾರೆ.

Nirmala hanamanta ganigera
ನಿರ್ಮಲಾ ಹನಮಂತ ಗಾಣಿಗೇರ

ಈ ಮೂಲಕ ಇಬ್ಬರೂ ನೂತನ‌ ಅಣ್ಣಿಗೇರಿ ತಾಲೂಕು ಪಂಚಾಯತ್‌ನ ಮೊದಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ.

ನವಲಗುಂದ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ಆಯ್ಕೆಯಾದ ಇಬ್ಬರಿಗೂ ಸಿಹಿ ಹಂಚುವುದರ ಮೂಲಕ ಶುಭಾಶಯ ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.