ETV Bharat / state

ಇಂದೋ ನಾಳೆ ಬೀಳುವ ಕಟ್ಟಡ ತೆರವುಗೊಳಿಸದೆ ನಿರ್ಲಕ್ಷ್ಯ.. ಪಾಲಿಕೆ ವಿರುದ್ಧ ಆಕ್ರೋಶ!

ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿರುವ ಕಟ್ಟಡವೊಂದು ಕುಸಿಯುವ ಹಂತ ತಲುಪಿದೆ. ಈ ಕಟ್ಟಡವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿಸದೆ ತೆರಿಗೆ ವಸೂಲಿಗೆ ನಿಂತಿದ್ದಾರೆ.

ಕಟ್ಟಡ ತೆರವುಗೊಳಿಸದ ಪಾಲಿಕೆ ಅಧಿಕಾರಿಗಳು
author img

By

Published : Sep 9, 2019, 8:28 PM IST

ಹುಬ್ಬಳ್ಳಿ: ಜನನಿಬಿಡ ಪ್ರದೇಶದಲ್ಲಿ ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಕಟ್ಟಡವನ್ನ ತೆರವುಗಳಿಸದೆ ಪಾಲಿಕೆ ಅಧಿಕಾರಿಗಳು ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.

ನಗರದ ದುರ್ಗದ್ ಬೈಲ್ ನಲ್ಲಿರುವ ವಾರ್ಡ್ ನಂ 45 ರಲ್ಲಿ ಕಟ್ಟಡವೊಂದು ಕುಸಿಯುವ ಹಂತ ತಲುಪಿದೆ. ಈ ಕಟ್ಟಡವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿಸದೆ ತೆರಿಗೆ ವಸೂಲಿಗೆ ನಿಂತಿದ್ದಾರೆ.

ಕಟ್ಟಡ ತೆರವುಗೊಳಿಸದ ಪಾಲಿಕೆ ಅಧಿಕಾರಿಗಳು

ದಶಕಗಳಿಂದ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು, ಇದೀಗ ಕರದ ಬಾಕಿ ಹಣ 20 ಲಕ್ಷ ದಾಟಿದೆ.‌ ಅಲ್ಲದೇ ಇತ್ತಿಚೆಗೆ ಪಾಲಿಕೆ ಅಧಿಕಾರಿಗಳು ಅವಳಿ ನಗರದ ಅನಧಿಕೃತ ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿಗಳನ್ನು ಸೀಜ್ ಮಾಡಿ ಬೀಗ ಜಡಿದಿದ್ದರು. ಆದರೆ ಕೆಲ ಬಿಲ್ಡರ್, ಜನಪ್ರತಿನಿಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಹಾಗೂ ಲಂಚದ ಆಸೆಗಾಗಿ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ. ವಸೂಲಿ ಮಾಡಬೇಕಾದ ಕರ ಬಾಕಿದಾರರಿಂದ ಕೇವಲ ನಾಮಕಾವಸ್ತೆಗೆ ಸಾವಿರಾರು ರೂಪಾಯಿ ಪಾವತಿ ಮಾಡಿಕೊಂಡು ಅಂಗಡಿ ನಡೆಸಲು ಅನುಮತಿ ನೀಡುವ ಹುನ್ನಾರದಲ್ಲಿದ್ದಾರೆಂದು ಆರೋಪಿಸಿದ್ದಾರೆ.

ಅಲ್ಲದೆ ಶಿಥಿಲಾವಸ್ಥೆಯ ಕಟ್ಟಡವನ್ನ ತೆರವುಗೊಳಿಸದೆ ಪಾಲಿಕೆ ಆ ಕಟ್ಟಡಕ್ಕೆ ನೋಟಿಸ್ ನೀಡಿ, ಕರ ವಸೂಲಿ ಮಾಡಲು ಮುಂದಾಗಿದೆ. ಆದ್ರೆ ಕಳೆದ ನಾಲ್ಕೈದು ತಿಂಗಳ ಹಿಂದಯೇ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಹಣದಾಸಗೆ ಬೇರೆ ಕೆಲಸಕ್ಕೆ ಕೈ ಹಾಕಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇನ್ನು ಕಟ್ಟಡದ ಮಾಲೀಕರುಅನಧಿಕೃತವಾಗಿ ಫುಟ್ ಪಾತ್ ಮೇಲಿನ ವ್ಯಾಪಾರಸ್ಥರಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಒದಗಿಸುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಹಾರಗಳು ನಡೆಯುತ್ತಿದ್ದರೂ ಪಾಲಿಕೆ ಮತ್ತು ಹೆಸ್ಕಾಂ ಅಧಿಕಾರಿಗಳು ಜಾಣ ಮೌನ ವಹಿಸಿದ್ದು, ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಮುಂದಾಗುವ ಅನಾಹುತಗಳನ್ನು ಅರಿತು ಶಿಥಿಲಗೊಂಡ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

Intro:ಹುಬ್ಬಳಿBody:ಅಪಾಯ ಹಂತಕ್ಕೆ ತಲುಪಿದ ಕಟ್ಟಡ.! ಪಾಲಿಕೆ ಯಡವಟ್ಟು.

ಹುಬ್ಬಳ್ಳಿ:- ಅದು ಜನನಿಬಿಡ ಪ್ರದೇಶದಲ್ಲಿರೋ ಕಟ್ಟಡ, ಇಂದೋ ನಾಳೆ ಬಿಳುವ ಹಾಗಾಗಿದೆ. ಏನಾದರೂ ಅನಾಹುತ ಆದ್ರೇ, ಸಾಕಷ್ಟು ಸಾವು ನೋವು ಸಂಭವಿಸಲಿವೆ. ಇಂತಹ ಬಿಲ್ಡಿಂಗ್ ತೆರವು ಮಾಡುವ ಬದಲು ಪಾಲಿಕೆ ಯಡವಟ್ಟು ಮಾಡಿದೆ. ಹೌದು ಪಾಲಿಕೆ ಬಿಲ್ಡಿಂಗ್ ತೆರವು ಮಾಡೋದನ್ನು ಬಿಟ್ಟು, ತೆರಿಗೆ ವಸೂಲಿ ಮಾಡಲು ಮುಂದಾಗಿರುವ ಪಾಲಿಕೆ ಅಧಿಕಾರಿಗಳಿಗೆ ಹಿಡಿ ಶಾಪ್ ಹಾಕುತ್ತಿದ್ದಾರೆ....

ಹೌದು, ನಗರದ ದುರ್ಗದ್ ಬೈಲ್ ನಲ್ಲಿರುವ ಮುನಸಿಪಲ್ ವಾರ್ಡ್ ನಂ 45 ರಲ್ಲಿ ನ ಪಿಐಡಿ ನಂಬರ್ 517, 519, 520 ರಲ್ಲಿನ ಕಟ್ಟಡದ ಆಸ್ತಿಕರವನ್ನು ದಶಕಗಳಿಂದ ತುಂಬದೇ ಬಾಕಿ ಉಳಿಸಿಕೊಂಡಿದ್ದು, ಇದೀಗ ಕರದ ಬಾಕಿ ಹಣ 20 ಲಕ್ಷ ದಾಟಿದೆ.‌ ಅಲ್ಲದೇ ಇತ್ತಿಚೆಗೆ ಪಾಲಿಕೆ ಅಧಿಕಾರಿಗಳು ಅವಳಿನಗರದ ಅನಧಿಕೃತ ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿಗಳನ್ನು ಸೀಜ್ ಮಾಡಿ ಬೀಗ ಜಡಿದಿದ್ದರು. ಆದರೆ ಕೆಲ ಬಿಲ್ಡರ್, ಜನಪ್ರತಿನಿಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಹಾಗೂ ಲಂಚದ ಆಸೆಗಾಗಿ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ ವಸೂಲಿ ಮಾಡಬೇಕಾದ ಕರ ಬಾಕಿದಾರರಿಂದ ಕೇವಲ ನಾಮಕಾವಸ್ತೆಗೆ ಸಾವಿರಾರು ರೂಪಾಯಿ ಪಾವತಿ ಮಾಡಿಕೊಂಡು ಅಂಗಡಿ ನಡೆಸಲು ಅನುಮತಿ ನೀಡುವ ಹುನ್ನಾರದಲ್ಲಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಶಿಥಿಲಾವ್ಯಸ್ಥೆಯ ಕಟ್ಟಡವನ್ನ ತೆರವುಗೊಳಿಸಿದೇ ಸಧ್ಯ ಪಾಲಿಕೆ ಆ ಕಟ್ಟಡಕ್ಕೆ ನೋಟಿಸ್ ನೀಡಿ ಕರ ವಸೂಲಿ ಮಾಡಲು ಮುಂದಾಗಿದೆ. ಆದ್ರೆ ಕಳೆದ ನಾಲ್ಕೈದು ತಿಂಗಳ ಹಿಂದಯೇ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಹಣದಾಸಗೆ ಬೇರೆ ಕೆಲಸಕ್ಕೆ ಕೈ ಹಾಕಿದೆ ಎನ್ನೋದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬೈಟ್:-ಪ್ರಕಾಶ ಬರುಬುರೆ, ಸ್ಥಳೀಯ

ಇನ್ನೂ ಜನನಿಬೀಡ ದುರ್ಗದ್ ಬೈಲ್ ನ ಕಟ್ಟಡ ಶಿಥೀಲಾವಸ್ತೆಯಲ್ಲಿದ್ದು, ಯಾವಾಗ ಬೇಕಾದರೂ ನೆಲಕಚ್ಚಲಿದೆ. ಇದರಿಂದಾಗಿ ಹಲವಾರು ಆಸ್ತಿ, ಜೀವಹಾನಿ ಸಂಭವಿಸಬಹುದಾಗಿದೆ. ಆದರೆ ಈವರೆಗೆ ಪಾಲಿಕೆ ಅಧಿಕಾರಿಗಳು ಮಾತ್ರ ಶಿಥಿಲಾವಸ್ತೆಯ
ಕಟ್ಟಡವ ತೆರವುಗೊಳಿಸಿಲ್ಲ. ಇನ್ನೂ ಕಟ್ಟಡದ ಮಾಲೀಕರುಯ ಅನಧಿಕೃತವಾಗಿ ಫುಟ್ ಪಾತ್ ಮೇಲಿನ ವ್ಯಾಪಾರಸ್ಥರಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಒದಗಿಸುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಹಾರಗಳು ನಡೆಯುತ್ತಿದ್ದರೂ ಪಾಲಿಕೆ ಮತ್ತು ಹೆಸ್ಕಾಂ ಅಧಿಕಾರಿಗಳು ಜಾನ ಮೌನ ವಹಿಸುತ್ತಿದ್ದು. ಕೂಡಲೇ ಸಂಬಂಧಪಟ್ಟಹ ಮೇಲಾಧಿಕಾರಿಗಳು ಮುಂದಾಗುವ ಅನಾಹುತಗಳನ್ನು ಅರಿತು ಶಿಥಿಲಗೊಂಡ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು.

ಬೈಟ್:- ಹನುಮಂತಪ್ಪ, ಸ್ಥಳೀಯರು.

ಒಟ್ನಲ್ಲಿ ಇಂದು ನಾಳೆ ಬಿಳುವ ಕಟ್ಟಡಕ್ಕೆ ಕರ ಭಾಕಿಯಿಂದೆ ಅಂತಾ ನೋಟೀಸ್ ನೀಡಲಾಗುತ್ತಿದೆ. ಆದರೆ ಈ ಬಿಲ್ಡಿಂಗ್ ಯಾವ ಕ್ಷಣದಲ್ಲಿಯಾದ್ರು ನೆಲಕಚ್ಚುವ ಹಂತವನ್ನು ತಲುಪಿವೆ. ಇನ್ನೂ ಮುಂದಾದ್ರೂ ಪಾಲಿಕೆ ಅಧಿಕಾರಿಗಳು ಕಣ್ಣು ಬಿಟ್ಡು ನೋಡಿ ಶಿಥಲಗೊಂಡ ಬಿಲ್ಡಿಂಗ್ ತೆರವು ಮಾಡಿ ಮುಂದೆ ನಡೆಯಬೇಕಾದ ಅನಾಹುತ ತಪ್ಪಿಸಬೇಕು. ಇಲ್ಲವಾದ್ರೆ ಧಾರವಾಡದಲ್ಲಿ ನಡೆದ ದುರಂತ ಹುಬ್ಬಳ್ಳಿಯಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ....!

__________________________

ಹುಬ್ಬಳ್ಳಿ: ಸ್ಟ್ರಿಂಜರ್
ಯಲ್ಲಪ್ಪ‌ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.