ಧಾರವಾಡ: ಸಿದ್ದರಾಮಣ್ಣ ಯಡಿಯೂರಪ್ಪರಿಗೆ ಹೇಳ್ತಾರೆ ನಾಲ್ಕು ಕಿ.ಮೀ. ಎಡವದೇ ನಡೆದುಕೊಂಡು ಹೋಗಿ ಅಂತಾ, ಸಿದ್ದರಾಮಣ್ಣ ನೀವು ಯಾರ ಯಾರ ಬಳಿ ಭಿಕ್ಷೆ ಬೇಡಿ ಕಾಲು ಬಿದ್ದು ಸಿಎಂ ಆದವರು ಎಂದು ನಿಮಗೆ ಗೊತ್ತಿರಬೇಕು ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ಈಗ ಆರಂಭವಾಗಿದೆ. ನಮ್ಮ ಪಕ್ಷ ಬೆಳೆದಿರುವುದೇ ಯಾತ್ರೆಯಿಂದ ನಾವು ಅಧಿಕಾರಕ್ಕೆ ಬಂದಿರುವುದೇ ಯಾತ್ರೆಯಿಂದ. ಆದರೇ ಸಿದ್ದರಾಮಯ್ಯ, ಯಡಿಯೂರಪ್ಪಗೆ ಹೇಳುತ್ತಾರೆ ಕಾರು - ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು ಹೋಗಿ ಎಂದು.
ಸಿದ್ದರಾಮಯ್ಯಗೆ ಗೊತ್ತಿರ ಬೇಕು ತಾವು ದೇವೇಗೌಡರ ಕಾಲಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿ ರಾಜಕಾರಣದಲ್ಲಿ ಬೆಳದವರು, ಅವರ ಕಾಲಡಿಯಲ್ಲಿ ಕುಳಿತು ಕಾಲಲ್ಲೆ ತುಳಿದರು. ಇಂದಿರಾ ಗಾಂಧಿಗೆ ಕೆಟ್ಟ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರೂ ಕೊನೆಗೆ ಸೋನಿಯಾ ಕಾಲಿಗೆ ಬಿದ್ದು ಸಿಎಂ ಆದ್ರು ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮಾಡಿದಷ್ಟು ಪಾದಯಾತ್ರೆ ಇವರ್ಯಾರು ಮಾಡಿಲ್ಲ: ಯಡಿಯೂರಪ್ಪ ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆ, ಯಡಿಯೂರಪ್ಪ ಮಾಡಿದಷ್ಟು ಸೈಕಲ್ ಯಾತ್ರೆ ಯಾರಿಂದಲೂ ಮಾಡೊಕೆ ಆಗಿಲ್ಲ ಯಡಿಯೂರಪ್ಪರಿಗೆ ಹೇಳುವ ಅವಶ್ಯಕತೆ ಇಲ್ಲ, ಕಾಂಗ್ರೆಸ್ ಯಾತ್ರೆ ಕಲಿತಿದ್ದೇ ನಮ್ಮಿಂದ ಸಿದ್ದರಾಮಣ್ಣನಿಗೆ ಅರಳು ಮರಳು ಹಿಡಿದಿದೆ.
ಅಧಿಕಾರ ಕಳೆದುಕೊಂಡು ಸಿದ್ಧರಾಮಯ್ಯ ಹುಚ್ಚರಾಗಿದ್ದಾರೆ ಎಂದು ಕಿಡಿ ಕಾರಿದರು. ಕಳೆದ ೫ ವರ್ಷದಲ್ಲಿ ಕೆಟ್ಟ ಶಬ್ದ ಬಳಕೆ ಮಾಡುತಿದ್ದಾರೆ. ದುರಹಂಕಾರ ತೊರಿಸುತ್ತಿದ್ದಾರೆ. ಅವರಿಗೆ ಭಯ ಕಾಡುತಿದೆ. ಸ್ಥಿರತೆ ಇಲ್ಲಾ ನಾಳೆ ಡಿಕೆಶಿಗೆ ಸಿಎಂ ಮಾಡ್ತಾರೆ, ಖರ್ಗೆ ಸಿಎಂ ಮಾಡ್ತಾರಾ ಎಂಬ ಭಯ ಇದೆ. ಆ ಭಯವೇ ಹುಚ್ಚನ್ನಾಗಿ ಮಾಡಿದೆ ಎಂದರು.
ರಾಹುಲ್ ಕಾಂಗ್ರೆಸ್ ನಾಯಕರಷ್ಟೇ?: ರಾಹುಲ್ ಗಾಂಧಿಗೆ ಬಚ್ಚಾ ಎನ್ನುವ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಒಬ್ಬ ಎಂಪಿ ಅಷ್ಟೇ ಕಾಂಗ್ರೆಸ್ ನಾಯಕರು ಆಗಿರಬಹುದು. ದೊಡ್ಡ ನಾಯಕನಲ್ಲ ಮೋದಿ ಈ ದೇಶದ ಪ್ರಧಾನಿ, ಇಂದಿರಾ ಗಾಂಧಿ ಪ್ರಧಾನಿ ಇದ್ದಾಗ ಅಟಲ್ ಅವರು ಯಾವತ್ತೂ ಏಕವಚನ ಬಳಕೆ ಮಾಡಿಲ್ಲ. ವಿರೋಧ ಪಕ್ಷ ಹೇಗೆ ನಡೆಯಬೇಕು ಎಂದು ಅಟಲ್ ಅವರು ತೊರಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾರೂ ಏಕವಚನ ಬಳಕೆ ಮಾಡಿಲ್ಲ ಇವತ್ತು ಸಿದ್ದರಾಮಣ್ಣ ಹಾಗೂ ರಾಹುಲ್ ಗಾಂಧಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಕಟೀಲ್ ಆರೋಪಿಸಿದರು.
ಬಿಎಸ್ವೈ ಹೇಳಿದ್ದು ಸರಿಯಾಗಿಯೇ ಇದೆ: ಯಡಿಯೂರಪ್ಪ ಹೇಳಿದ್ದು ಸರಿ ಇದೆ ರಾಹುಲ್, ಮೋದಿ ಎದುರು ಸಣ್ಣ ಹುಡುಗನೇ ಈಗ ನಾನು ಅಧ್ಯಕ್ಷ ಎಂದು ದೊಡ್ಡನವಾಗಲ್ಲ ಯಡಿಯೂರಪ್ಪನವರ ಎದುರು ನಾನು ಕೂಡ ಸಣ್ಣವನೇ. ಪ್ರಧಾನಿ ಬಗ್ಗೆ ಮಾತನಾಡುವಾಗ ಅನುಭವ ಇಟ್ಟುಕೊಂಡು ಮಾಡನಾಡಬೇಕು. ಇವತ್ತು ನೆಹರು ಅವರು ಗಾಂಧಿ ಕಾಲಿಗೆ ಸರಿಯಾಗುತ್ತಾರಾ ಅದು ತಪ್ಪಾಗುತ್ತೆ. ಸಿದ್ದರಾಮಣ್ಣ ಸಿಎಂ ಆಗಿದ್ದವರು ಗೌರವದಿಂದ ನಡೆದುಕೊಂಡರೆ ಎಲ್ಲರೂ ಹಾಗೆಯೇ ನಡೆದುಕೊಳ್ತಾರೆ.
ಅವರು ಬೇಜವಾಬ್ದಾರಿಯಿಂದ ನಡೆದರೆ ಎಲ್ಲರೂ ಹಾಗೆಯೇ ನಡೆದುಕೊಳ್ತಾರೆ ಎಂದರು. ಸಿದ್ದರಾಮಯ್ಯ, ಕಟೀಲ್ ಗೆ ವಿದೂಷಕ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅವರು ವಿಲ್ಲನ್ನಾ? ನಮಗೆ ಯಾಕೆ ಭಯ, ಭಯ ಡಿಕೆಶಿ, ಪರಮೇಶ್ವರ ಹಾಗೂ ಖರ್ಗೆಗೆ ಇರಬೇಕು. ಕಾಂಗ್ರೆಸ್ ನಲ್ಲಿ ಇವರ ಭಯ ಅವರಿಗೆ, ಅವರ ಭಯ ಇವರಿಗೆ ಇದೆ ಎಂದ್ರು.
ಮೀಸಲಾತಿ ಬಗ್ಗೆ ಬೆಲ್ಲದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಲ್ಲದ ಅವರ ಅನಿಸಿಕೆ ಹೇಳಿದ್ದಾರೆ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುತ್ತೆ ಎಂದರು. ಇನ್ನು ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಬಗ್ಗೆ ನಾನು ಮಾತನಾಡಲ್ಲ ನ್ಯಾಯಾಲಯದಲ್ಲಿ ತೀರ್ಪು ಬರಲಿ ಎಂದು ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ಕಿಮೀ ಎಡವದೇ ನಡೆದುಕೊಂಡು ಹೋಗಿ: ಬಿಜೆಪಿ ಯಾತ್ರೆಗೆ ಸಿದ್ದರಾಮಯ್ಯ ಸವಾಲು