ಧಾರವಾಡ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಧಾರವಾಡದ ಮಹಿಳೆಯರು ವಿಶೇಷವಾಗಿ ಆಚರಿಸಿದ್ದಾರೆ. ಜಾನಪದ ಸಂಶೋಧನಾ ಕೇಂದ್ರದ ಮಹಿಳೆಯರು ಎತ್ತಿನ ಬಂಡಿ ಏರಿ ಉತ್ತರ ಕರ್ನಾಟಕ ಶೈಲಿಯ ಉಡುಗೆ ತೊಟ್ಟು ಹಳೆಯ ಸಂಪ್ರದಾಯದಂತೆ ಹಬ್ಬಾಚರಣೆ ಮಾಡಿ ಖುಷಿಪಟ್ಟರು.
ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿನಿಸುಗಳನ್ನು ನಾಗಪ್ಪನಿಗೆ ಅರ್ಪಿಸಿ, ಹಾಡಿನ ಮೂಲಕ ಹಾಲೆರೆದರು. ಒಟ್ಟು 5 ದಿನಗಳವರೆಗೆ ರೊಟ್ಟಿ ಪಂಚಮಿ, ಉಂಡಿ ಹಬ್ಬ, ಬೆಲ್ಲದ ಹಾಲು ಹಾಗು ಬಿಳಿ ಹಾಲು ಎಂದು ಹಬ್ಬಾಚರಣೆ ಮಾಡುವುದು ಇಲ್ಲಿನ ಸಂಪ್ರದಾಯ.
ಇದನ್ನೂ ಓದಿ: ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಅದ್ಧೂರಿ ವೇದಿಕೆ, ಸಕಲ ಸಿದ್ಧತೆ