ETV Bharat / state

ಮೂರುಸಾವಿರ ಮಠದ ಆವರಣ ಸೀಲ್​ಡೌನ್.. ಭಕ್ತರ ಪ್ರವೇಶಕ್ಕೆ ನಿರ್ಬಂಧ - Hubli

ಪ್ರತಿಷ್ಠಿತ ಮೂರುಸಾವಿರ ಮಠದ‌ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಠದ ಆವರಣವನ್ನು ಸೀಲ್​​ಡೌನ್ ಮಾಡಲಾಗಿದೆ.

Seal Down
ಮೂರುಸಾವಿರ ಮಠ ಸೀಲ್​ಡೌನ್
author img

By

Published : Jun 24, 2020, 2:36 PM IST

ಹುಬ್ಬಳ್ಳಿ : ಕೊರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ವೃದ್ದಿಸುತ್ತಿವೆ. ನಗರದ ಪ್ರತಿಷ್ಠಿತ ಮೂರುಸಾವಿರ ಮಠದ‌ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಮಠದ ಆವರಣವನ್ನು ಈಗ ಸೀಲ್​​ಡೌನ್ ಮಾಡಲಾಗಿದೆ.

Seal Down
ಶ್ರೀ ಮೂರುಸಾವಿರ ಮಠದ ಆವರಣವ ಸೀಲ್​ಡೌನ್..

ಪ್ರತಿದಿನವೂ ನೂರಾರು ಭಕ್ತರು ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ, ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಠಕ್ಕೆ‌ ಬರುವ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಪಿ-9418 ಸೋಂಕಿತ ಪಕ್ಕದಲ್ಲಿರುವುದರಿಂದ ಮಠದ ಸುತ್ತಲಿನ 100 ಮೀಟರ್ ಪ್ರದೇಶ ಸೀಲ್​ಡೌನ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.

ಅಲ್ಲದೇ ಮಠದ ಆವರಣದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಅನಾವಶ್ಯಕ ಓಡಾಡದಂತೆ ಸೂಚನೆ ನೀಡಲಾಗಿದೆ. ಮಠದ ಭಕ್ತರಿಗೆ ದರ್ಶನ ಭಾಗ್ಯ ಇಲ್ಲವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.