ETV Bharat / state

ಹುಬ್ಬಳ್ಳಿಯಲ್ಲಿ ಮಧ್ಯರಾತ್ರಿ ಹರಿದ ನೆತ್ತರು: ಯುವಕನ ಬರ್ಬರ ಕೊಲೆ - ಯುವಕನ ಬರ್ಬರ ಹತ್ಯೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದೆ. ನಗರದ ಹೊರವಲಯದಲ್ಲಿ ಯುವಕನನ್ನು ಕೊಲೆ ಮಾಡಿ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಶವವನ್ನು ಎಸೆದು ಹೋಗಿದ್ದಾರೆ.

murder of a youth at midnight in Hubli
ಹುಬ್ಬಳ್ಳಿಯಲ್ಲಿ ನಡುರಾತ್ರಿ ಯುವಕನ ಬರ್ಬರ ಹತ್ಯೆ
author img

By

Published : Dec 4, 2020, 8:33 AM IST

ಹುಬ್ಬಳ್ಳಿ: ಮಧ್ಯರಾತ್ರಿ ಯುವಕನೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿ ವಿದ್ಯಾನಗರ ಠಾಣಾ ವ್ತಾಪ್ತಿಯಲ್ಲಿ ಶವವನ್ನು ಎಸೆದು ಹೋಗಿರುವ ಘಟನೆ ನಡೆದಿದೆ.

ಕೊಲೆಯಾದ ಯುವಕನನ್ನು ಹಳೆಹುಬ್ಬಳ್ಳಿಯ ನಿವಾಸಿ ಶಾರುಖ್ ಸೌದಾಗರ್ ಎಂದು ಗುರುತಿಸಲಾಗಿದೆ. ನಗರದ ಹೊರವಲಯದಲ್ಲಿ ದುಷ್ಕರ್ಮಿಗಳು ಯುವಕನ ಮೇಲೆ ದಾಳಿ ನಡೆಸಿ ತೊಡೆ ಹಾಗೂ ಬೆನ್ನು ಮೂಳೆ ಮುರಿಯುವಂತೆ ಹೊಡೆದು ಕೊಂದಿದ್ದಾರೆ. ಬಳಿಕ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾರುಖ್ ನ ಮೃತದೇಹ ಎಸೆದಿದ್ದಾರೆ.

ಓದಿ:ಭದ್ರಾವತಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣ

ಈ ಕೊಲೆಗ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೆಲ ಪೊಲೀಸ್ ಮೂಲಗಳ‌ ಪ್ರಕಾರ ಹಳೇ ವೈಷಮ್ಯದಿಂದ ರೌಡಿಶೀಟರ್ ಸಲೀಂ ಬಳ್ಳಾರಿ ಎಂಬಾತನ ತಂಡ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ‌ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.