ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್ ಬಳಿಯ ಸಾರ್ವಜನಿಕ ಬಸ್ ನಿಲ್ದಾಣ ಹಾಗೂ ಫುಟ್ಪಾತ್ ಆಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕಟ್ಟಡ ಮಾಲೀಕನಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.
ಸುನೀಲ್ ಕೊಠಾರಿ ಎಂಬುವರಿಗೆ ಸೇರಿರುವ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಬಸ್ ನಿಲ್ದಾಣ ಸೇರಿದಂತೆ ಫುಟ್ಪಾತ್ ಅತಿಕ್ರಮಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಮಾಲೀಕರ ಗಮನಕ್ಕೆ ತಂದಿದೆ ಎನ್ನಲಾಗ್ತಿದೆ. ಇಷ್ಟಾದರೂ ಕಾಮಗಾರಿ ಮುಂದುವರಿಸಿದ್ದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ.
ಇದೊಂದೇ ಕಟ್ಟಡವಲ್ಲದೆ, ನಗರದ ಹಲವೆಡೆ ಅಕ್ರಮ ಕಾಮಗಾರಿಯ ವಿರುದ್ಧ ಪಾಲಿಕೆ ಸಮರಕ್ಕಳಿದಿದೆ. ನಮ್ಮ ಗಮನಕ್ಕೆ ಬರುವ ಅಕ್ರಮದ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗುವುದಾಗಿ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಹೇಳಿದರು.
![municipality-noticed-to-owner-who-illegally-started-building-construction-in-govt-space](https://etvbharatimages.akamaized.net/etvbharat/prod-images/kn-hbl-01-akram-katad-pkg-7208089_23092021081149_2309f_1632364909_307.jpg)
ಇದನ್ನೂ ಓದಿ: ಅವೈಜ್ಞಾನಿಕ ಕಾಮಗಾರಿ: ಮಳೆಗೆ ಕೊಚ್ಚಿ ಹೋದ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್