ಧಾರವಾಡ: ನಗರದಲ್ಲಿ ಎಂಟು ತಿಂಗಳ ಬಳಿಕ ಚಿತ್ರಮಂದಿರ ಆರಂಭಗೊಂಡಿದ್ದು, ಧಾರವಾಡದ ಚಿತ್ರಮಂದಿರ ಸಿಬ್ಬಂದಿಗೆ ಸಿಹಿ ನೀಡಿ ಸ್ವಾಗತಿಸಿಕೊಳ್ಳಲಾಯಿತು.
ಧಾರವಾಡ ಸಂಗಮ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಗೊಂಡಿರುವ ಆಕ್ಟ್-1978 ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಪ್ರದರ್ಶನ ಆರಂಭಕ್ಕೂ ಮುಂಚೆ ಚಿತ್ರಮಂದಿರ ಸಿಬ್ಬಂದಿಗೆ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್ ಸುಬ್ಬಯ್ಯ ಸಿಹಿ ಹಂಚಿ ಸ್ವಾಗತಿಸಿಕೊಂಡರು. ಧಾರವಾಡ ಸಿನಿ ಪ್ರಿಯರ ಬಳಗದಿಂದ ಸಿಹಿ ನೀಡಿ ಸ್ವಾಗತಿಸಿಕೊಳ್ಳಲಾಯಿತು.
ಕೊರೊನಾ ನಿಯಗಳನ್ನು ಪಾಲಿಸಿ ಚಿತ್ರಮಂದಿರ ಆರಂಭಿಸಲಾಗಿದ್ದು, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಸಿಂಪಡಿಸಿ ಪ್ರೇಕ್ಷಕರನ್ನು ಒಳ ಬಿಡಲಾಗುತ್ತಿದೆ.