ETV Bharat / state

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್‌ಗೆ ಮಾತೃವಿಯೋಗ - mother of film academy of karnakata sunil puranik passes away

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಿತು.

ಧಾರವಾಡ
ಧಾರವಾಡ
author img

By

Published : Aug 3, 2020, 6:14 PM IST

ಧಾರವಾಡ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್ ಅವರು ನಿನ್ನೆ (ಅ.02) ರಾತ್ರಿ ಧಾರವಾಡದ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 84ವರ್ಷ ವಯಸ್ಸಾಗಿತ್ತು.

ಧಾರವಾಡ
ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್

ತಮ್ಮ ಪತಿ ನಿವೃತ್ತ ಉಪ ತಹಶೀಲ್ದಾರ ನರಸಿಂಹಚಾರ್ ಪುರಾಣಿಕ್ ಅವರು 25 ವರ್ಷಗಳ ಹಿಂದೆ ನಿಧನರಾದ ಬಳಿಕ ಕಮಲಾಬಾಯಿ ಅವರು ಧಾರವಾಡದಲ್ಲಿಯೇ ನೆಲೆಸಿದ್ದರು. ಅವರಿಗೆ ಒಂಬತ್ತು ಮಂದಿ ಮಕ್ಕಳಿದ್ದು, ಸುನೀಲ್ ಪುರಾಣಿಕ್ ಕೊನೆಯ ಮಗನಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಧಾರವಾಡದಲ್ಲಿಂದು ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.