ಧಾರವಾಡ: ಕೊರೊನಾ ಕಷ್ಟ ಕಾಲದಲ್ಲಿ ಧಾರವಾಡದ ಮಠವೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದೆ. ವೈರಸ್ನಿಂದ ತಂದೆ-ತಾಯಿ ಕಳೆದುಕೊಂಡ ಅನಾಥವಾದ ಮಕ್ಕಳಿಗೆ ಮಠ ನೆರೆವಿಗೆ ಸಿದ್ಧವಾಗಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತ ಮಠ ಕೊರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಧಾವಿಸಿದೆ. ಶ್ರೀಮಠದ ಪೀಠಾಧಿಪತಿ ಕುಮಾರ ವಿರುಪಾಕ್ಷ ಸ್ವಾಮೀಜಿ ಪ್ರವಚನದ ಮೂಲಕವೇ ಲಕ್ಷಾಂತರ ಭಕ್ತ ಸಮೂಹ ಹೊಂದಿದ್ದಾರೆ.
ಕೊರೊನಾ ಕಷ್ಟ ಕಾಲದಲ್ಲಿ ಅನೇಕ ಬಡ ಕುಟುಂಬಗಳು ತೀವ್ರ ತೊಂದರೆಗೊಳಗಾಗಿವೆ. ಅನೇಕ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಂತಹ ಮಕ್ಕಳನ್ನು ಸ್ವಾಮೀಜಿಗಳು ಗುರುತಿಸಿ ಆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಿಗೆ ಉಚಿತವಾಗಿ ಮಠದಲ್ಲಿ ಇರಲು ವ್ಯವಸ್ಥೆ ಕಲ್ಪಿಸುವ ಮೂಲಕ ಬಡ ಮಕ್ಕಳ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಸ್ವಾಮೀಜಿ ಅವರು ತೆಗೆದುಕೊಂಡ ಸಮಾಜಮುಖಿ ಕಾರ್ಯಕ್ಕೆ ಜಿಲ್ಲೆಯಲ್ಲಿ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ.