ಧಾರವಾಡ: ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಪೋಸ್ಟ್ ಕೋವಿಡ್ ನಂತರ ಮೊಲದ ಬಾರಿಗೆ ಪ್ರಧಾನಿ ಮೋದಿ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.
ಫೈನಲ್ ಆಗದ ಉದ್ಘಾಟನಾ ವೇದಿಕೆ: ಈ ಕುರಿತು ಕವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, 5 ದಿನ ನಡೆಯುವ ಕಾರ್ಯಕ್ರಮ ಇದಾಗಿದೆ. 3,500 ಜನ ಇದರಲ್ಲಿ ಭಾಗವಹಿಸುತ್ತಾರೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇವೆಂಟ್ ಕರ್ನಾಟಕ ವಿಶ್ವವಿದ್ಯಾಲಯ(ಕವಿವಿ)ಲ್ಲಿ ನಡೆಯಲಿದೆ. ಆದ್ರೆ ಉದ್ಘಾಟನೆ ಮಾಡುವ ವೇದಿಕೆ ಇನ್ನೂ ಅಂತಿಮ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಗೆ ಬರಲಿರುವ ಪ್ರಧಾನಿ: ಅವಳಿನಗರದ ಎಲ್ಲ ಕಡೆ ವೇದಿಕೆ ಮಾಡಲಿದ್ದೇವೆ. ಬಾಲಿವುಡ್ ನಟರನ್ನು ಕರೆಸುವ ಬಗ್ಗೆ ವಿಚಾರ ಮಾಡಲಾಗಿದೆ. ದೇಶದ ಒಟ್ಟು ಐಕ್ಯತೆಯನ್ನು ಶೋಕೇಸ್ ಮಾಡಲು ಇದನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನವರಿ 12 ರಿಂದ 16ರವರೆಗೆ ಕಾರ್ಯಕ್ರಮ ಜರುಗಲಿದೆ. ಜ. 12 ರಂದು ಹುಬ್ಬಳ್ಳಿಗೆ ಪ್ರಧಾನಿ ಆಗಮಿಸಲಿದ್ದಾರೆ. ಉದ್ಘಾಟನೆ ಮಾಡುವ ವೇದಿಕೆಯನ್ನು ಶೀಘ್ರದಲ್ಲೇ ಫೈನಲ್ ಮಾಡ್ತೇವೆ ಎಂದು ಸಚಿವ ಜೋಶಿ ತಿಳಿಸಿದರು.
ಇನ್ನು, ಬೇರೆ ಬೇರೆ ಅಭಿವೃದ್ಧಿ ಕಾರ್ಯ ಮಾಡುವ ಉದ್ದೇಶ ಕೂಡ ಇದೆ. ಐಐಟಿ ಉದ್ಘಾಟನೆ, ಹುಬ್ಬಳ್ಳಿ ರೈಲ್ವೆ ಫ್ಲಾಟ್ಫಾರ್ಮ್ ಸೇರಿ ಹಲವು ಕಾರ್ಯಕ್ರಮಗಳು ಸಹ ಇವೆ. ಅದನ್ನ ವಿಚಾರ ಮಾಡುತ್ತಿದ್ದೇವೆ. ಇವತ್ತು ದೆಹಲಿಗೆ ಹೋದ ನಂತರ ಆ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಧಾನಿ ಭದ್ರತೆ ಬಗ್ಗೆ ಕೂಡ ಚರ್ಚೆ ಇರುತ್ತದೆ. ಆರ್ಥಿಕ ಅನುದಾನ ಕೇಂದ್ರ ಸರ್ಕಾರ 10 ಕೋಟಿ ಹಾಗೂ ರಾಜ್ಯ ಸರ್ಕಾರ 10 ಕೋಟಿ ಕೊಡಲಿದೆ ಎಂದು ಹೇಳಿದರು.
ನಟ ಅಕ್ಷಯ್ ಕುಮಾರ್ ಅಹ್ವಾನ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕರೆ ಮಾಡಿ ಮಾತನಾಡಿದರು. ಯುವಜನೋತ್ಸವ ಕಾರ್ಯಕ್ರಮಕ್ಕೆ ಅಕ್ಷಯ್ ಕುಮಾರ್ಗೆ ಬರಲು ಜೋಶಿ ಆಹ್ವಾನ ನೀಡಿದರು. ಮತ್ತೆ ಮಾತನಾಡುತ್ತೇನೆ ನಿಮ್ಮ ಜೊತೆ. ಪ್ರಧಾನಿ ಕೂಡ ಆಗಮಿಸಲಿರುವ ಹಿನ್ನೆಲೆ ನೀವು ಬರಬೇಕು ಎಂದು ಆಹ್ವಾನ ನೀಡಿದರು. ಆದ್ರೆ ಅಕ್ಷಯ್ ಕುಮಾರ್ ಲಂಡನ್ಗೆ ಹೊರಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಪಾದಯಾತ್ರೆ ನಡೆಸಿದಲ್ಲೆಲ್ಲಾ ಕಾಂಗ್ರೆಸ್ಗೆ ಸೋಲು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ
BRTS ಆಗಿರುವುದೇ ಕಾಂಗ್ರೆಸ್ ಕಾಲದಲ್ಲಿ. ಆಗ ಅವರ ಕಾಲದಲ್ಲಿ ಇದನ್ನು ವಿಚಾರ ಮಾಡಬೇಕಿತ್ತು. ಕೋರ್ಟ್ ಸ್ಟೇ ಮಾಡಿತ್ತು, ಆದ್ರೆ ಈಗ ಸ್ಟೇ ಹಿಂಪಡೆದಿದೆ. ನಾವು ಸೆಕ್ಯುಲರ್ ಅಲ್ಲ, ಅವರು ಸೆಕ್ಯುಲರ್. ಅವರ್ಯಾಕೆ ಆಗ ಮಾಡಲಿಲ್ಲ, ಕಮ್ಯುನಲ್ ದೃಷ್ಟಿಯಿಂದ ಇದನ್ನು ನೋಡಬಾರದು. ಉದ್ದ ಉದ್ದ ಭಾಷಣ ಮಾಡೋರು ಸಹ ನಮ್ಮ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ನಿಮ್ಮ ಕೆಲಸ ನೀವು ಮಾಡಿ, ನಾವು ನಿಮ್ಮ ವಿರುದ್ಧ ದೊಡ್ಡ ದೊಡ್ಡ ಭಾಷಣ ಮಾಡ್ತೀವಿ ಅಂತ ಹೇಳಿದ್ರು. ನಾವು ಆಯ್ತು ಮಾಡಿ ಅಂತ ಹೇಳಿದ್ದೇವೆ. ಕೇವಲ ದರ್ಗಾ ಅಷ್ಟೇ ಅಲ್ಲಿ ಒಡೆದಿಲ್ಲ, ಚರ್ಚ್, ದೇವಸ್ಥಾನಗಳನ್ನು ತೆರವು ಮಾಡಲಾಗಿದೆ ಎಂದು ಪ್ರತಿಪಕ್ಷಗಳ ನಾಯಕರಿಗೆ ಜೋಶಿ ಟಾಂಗ್ ಕೊಟ್ಟರು.
ಇದನ್ನೂ ಓದಿ: ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ, ಉದ್ಘಾಟನೆಗೆ ಪ್ರಧಾನಿ ಆಗಮನ: ಸಿಎಂ ಬೊಮ್ಮಾಯಿ
ಜನಾರ್ದನ್ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಬಿಜೆಪಿ ಐಡಿಯಾಲಾಜಿಕ್ ಪಾರ್ಟಿ, ಅದರ ಬಗ್ಗೆ ತಿಳಿದುಕೊಂಡು ನಾನು ಮಾತನಾಡುತ್ತೇನೆ. ಸಿಎಂ ಹಾಗೂ ರಾಜ್ಯಾಧ್ಯಕ್ಷರು ನಂಗೆ ಸಿಕ್ಕಿಲ್ಲ. ದೆಹಲಿಗೆ ನಾಳೆ ಸಿಎಂ ಬರಲಿದ್ದಾರೆ. ಅಲ್ಲಿ ಚರ್ಚೆ ಮಾಡ್ತೀವಿ ಎಂದು ಕೇಂದ್ರ ಸಚಿವರು ಪ್ರತಿಕ್ರಿಯಿಸಿದರು.