ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಶಾರದಾ ಹೈಸ್ಕೂಲ್‌ಗೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರು. ಈ ವೇಳೆ ಹೊರಟ್ಟಿ ಮತ್ತು ಮಹಿಳಾ ಪಿಎಸ್ಐ ಕವಿತಾ ಅವರ ಜತೆ ಮಾತನಾಡಿ, 200 ಮೀಟರ್ ಗೆರೆಯಿಂದ ಹೊರಗೆ ಇದ್ದವರಿಗೆ ತೊಂದರೆ ಕೊಡಬೇಡಿ, ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ ಎಂದು ಜೋರಾಗೇ ಹೇಳಿದರು.
ಚುನಾವಣಾಧಿಕಾರಿ ಮಾಡಿದ ಆದೇಶವನ್ನು ತಮ್ಮ ಬೆಂಬಲಿಗರು ಪಾಲನೆ ಮಾಡುತ್ತಿಲ್ಲ. ಮತಗಟ್ಟೆ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಪಿಎಸ್ಐ ಹೇಳುತ್ತಿದ್ದಂತೆ ಹೊರಟ್ಟಿ ಅವರು ಪಿಎಸ್ಐ ಕವಿತಾ ಅವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ, 144 ಸೆಕ್ಷನ್ ಜಾರಿ ಇರುವ 200 ಮೀಟರ್ ಗೆರೆಯಿಂದ ಹೊರಗೆ ಇರುವವರಿಗೆ ತೊಂದರೆ ಕೊಡಬೇಡಿ ಎಂದು ಕಿವಿ ಮಾತು ಹೇಳಿದರು.
ಓದಿ: ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ : ಬಸವರಾಜ್ ಹೊರಟ್ಟಿ
ಒಂದು ಟೇಬಲ್ ಹಾಗೂ ಎರಡು ಖುರ್ಚಿಗಳನ್ನು ಹಾಕಿಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಜಾಸ್ತಿ ಜನ ಕುಳಿತುಕೊಳ್ಳುವಂತಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದು ಪಿಎಸ್ಐ ಹೇಳುತ್ತಿದ್ದಂತೆ ಹೊರಟ್ಟಿ ಯಾರೀ ಅವರು ಡಿಸಿ ಎಂದರು. ಕೊನೆಗೆ, ನಿಮ್ಮ ಕಾನೂನು ಪ್ರಕಾರ ನೀವು ಏನು ಮಾಡಬೇಕೋ ಅದನ್ನು ಮಾಡಿ. ಒಂದು ಟೇಬಲ್, ಎರಡು ಖುರ್ಚಿ ಹಾಕಿಕೊಂಡು ನಮ್ಮವರು ಕುಳಿತುಕೊಳ್ಳುತ್ತಾರೆ ಎಂದು ಹೊರಟ್ಟಿ ಹೇಳಿ ಅಲ್ಲಿಂದ ತೆರಳಿದರು.