ಧಾರವಾಡ: ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೇ ತಪ್ಪೇನು..? ಎಂದು ಧಾರವಾಡ ಗ್ರಾಮೀಣ ಬಿಜೆಪಿ ಶಾಸಕ ಅಮೃತ ದೇಸಾಯಿ ಸಚಿವ ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಬಹುದು ಎಂದಿದ್ದಾರೆ. ರಾಷ್ಟ್ರ ಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ನೂರಾರು ವರ್ಷದ ನಂತರ ಹಾರಬಹುದು ಎಂದಿದ್ದಾರೆ. ರಾಷ್ಟ್ರ ಧ್ವಜ ತೆಗೆಯುತ್ತೇವೆ ಎಂದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಈಶ್ವರಪ್ಪಗೆ ಪಕ್ಷದ ಅಧ್ಯಕ್ಷರ ಸೂಚನೆ ವಿಚಾರವಾಗಿ ಮಾತನಾಡಿದ ಅವರು ಈಶ್ವರಪ್ಪನವರಿಗೆ ಏನೂ ಹೇಳಿದ್ದಾರೆಂಬ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಹಿಜಾಬ್ ವಿವಾದ ವಿಚಾರಕ್ಕೆ ಮಾತನಾಡಿ, ದೇಶದ ಕಾನೂನು ಗೌರವಿಸುವವರು ಈ ದೇಶದಲ್ಲಿ ಇರಲಿ ಇಲ್ಲಾಂದ್ರೆ ದೇಶ ಬಿಟ್ಟು ಹೋಗಲಿ. ಕಳೆದೊಂದು ತಿಂಗಳಿನಿಂದ ಹಿಜಾಬ್ ವಿವಾದ ಆಗಿದೆ. ಕೋರ್ಟ್ ಮಧ್ಯಂತರ ಆದೇಶವನ್ನೂ ನೀಡಿದೆ. ಆದರೂ ಕೆಲವರು ಅದನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಪೂರ್ಣ.. ತೀರ್ಪು ಕಾಯ್ದಿರಿಸಿದ ಹೈಕೋರ್ಟ್