ETV Bharat / state

ಶಾಸಕ ರಾಯರೆಡ್ಡಿ ಫಾರ್ಮ್​ ಹೌಸ್​ಗೆ ಸಚಿವರ ಭೇಟಿ, ಚರ್ಚೆ.. ಪತ್ರ ಕುರಿತು ಬಸವರಾಜ್ ಸ್ಪಷ್ಟನೆ - ಶಾಸಕ ಬಸವರಾಜ್ ರಾಯರೆಡ್ಡಿ

ಶಾಸಕ ಬಸವರಾಜ್ ರಾಯರೆಡ್ಡಿ ಅವರನ್ನು ಸಚಿವರಾದ ಶರಣಪ್ರಕಾಶ್ ಪಾಟೀಲ್ ಹಾಗೂ ಎಂ ಸಿ ಸುಧಾಕರ್ ಭೇಟಿ ಆಗಿ ಚರ್ಚೆ ನಡೆಸಿದ್ದಾರೆ. ಬಳಿಕ ಭೇಟಿ ಕುರಿತು ರಾಯರೆಡ್ಡಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ರಾಯರೆಡ್ಡಿ ಫಾರ್ಮ್​ ಹೌಸ್​ಗೆ ಸಚಿವರ ಭೇಟಿ

author img

By ETV Bharat Karnataka Team

Published : Sep 4, 2023, 1:04 PM IST

Updated : Sep 4, 2023, 1:17 PM IST

ಶಾಸಕ ಬಸವರಾಜ್ ರಾಯರೆಡ್ಡಿ ಮಾಧ್ಯಮ ಪ್ರತಿಕ್ರಿಯೆ

ಧಾರವಾಡ: ಶಾಸಕ ರಾಯರೆಡ್ಡಿಯನ್ನು ಕಾಂಗ್ರೆಸ್​ ಸಚಿವರಾದ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಎಂ ಸಿ ಸುಧಾಕರ್ ಭೇಟಿ ಆಗಿ ಚರ್ಚೆ ನಡೆಸಿದ್ದು, ಕುತೂಹಲ ಮೂಡಿಸಿದೆ. ಸಚಿವರ ಭೇಟಿ ಬಳಿಕ ಶಾಸಕ ಬಸವರಾಜ್ ರಾಯರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

'ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಸಮಯದಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಟ್ರಾನ್ಸಫರ್‌ಗಳು ಬರ್ನ್ ಆಗುತ್ತಿವೆ. ಅದಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಸಿಎಂ ಅವರೇ ಹಣಕಾಸು ಖಾತೆ ಹೊಂದಿದ್ದಾರೆ. ಹೀಗಾಗಿ ನಾನು ಸಿಎಂ ಅವರಿಗೆ ಈ ಕುರಿತು ಸಭೆ ಮಾಡಿ ಎಂದು ಪತ್ರ ಬರೆದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದುವರೆದು ರಾಯರೆಡ್ಡಿ, ಈ ವಿಚಾರ ಜನರಿಗೆ ತಿಳಿಯಲಿ ಎಂದು ಬರೆದಿದ್ದ ಪತ್ರವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದೆ. ಸೆ. 5ರಂದು (ನಾಳೆ)ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಈಗ ಇಡೀ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಇದನ್ನು ನಕರಾತ್ಮಕವಾಗಿ ತೆಗೆದುಕೊಂಡರೆ ಹೇಗೆ? ನಾನು ಕಾಂಗ್ರೆಸ್‌ನಲ್ಲಿ ಸಿಟ್ಟಾಗಿಲ್ಲ ಸಿಟ್ಟು ಆಗುವುದಂತಹುದು ಏನೂ‌ ಇಲ್ಲ. ನಾನು ಕಾಂಗ್ರೆಸ್ ಸಹ ಬಿಡುವುದಿಲ್ಲ ಬಿಜೆಪಿಗೆ ಹೋಗಲು ನನಗೆ ತೊಂದರೆಯೂ ಇಲ್ಲ. ಆದರೆ ಬಿಜೆಪಿಯ ಐಡಿಯಾಲಜಿಗಳು ನನಗೆ ಸರಿ ಹೊಂದುವುದಿಲ್ಲ. ಬಿಜೆಪಿಯವರು ನನ್ನನ್ನು ಕರೆದಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಬದಲಾಗಿ ಅವರು ಎಲ್ಲರನ್ನೂ ಕರೆಯುತ್ತಲೇ ಇರುತ್ತಾರೆ ಎಂದರು‌.

ಸಿಎಂ ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ. ವೈಯಕ್ತಿಕವಾಗಿ ಸಿಎಂ ನನಗೆ ಬೇಕಾದವರು, ಒಳ್ಳೆ ಜನ ನಾಯಕ. ಸಿದ್ದರಾಮಯ್ಯರಂತಹ ರಾಜಕಾರಣಿಗಳು ಸಿಗುವುದಿಲ್ಲ. ನಾನು, ಸಿದ್ದರಾಮಯ್ಯ, ದೇಶಪಾಂಡೆ, ಖರ್ಗೆ ಎಲ್ಲರೂ ಒಂದೇ ಕಾಲಕ್ಕೆ ಬಂದವರು ಇಬ್ಬರೂ ಸಚಿವರನ್ನು ಕೊಪ್ಪಳದ ಕೆಲ ವಿಷಯವಾಗಿ ನಾನೆ ಕರೆದಿದ್ದೆ. ನನ್ನ ಕ್ಷೇತ್ರಕ್ಕೆ ಇವತ್ತು ಕರೆದುಕೊಂಡು ಹೋಗುತ್ತಿದ್ದೇನೆ, ಹೀಗಾಗಿ ಇಲ್ಲಿಗೆ ಬಂದಿದ್ದಾರೆ. ಇಲ್ಲಿಂದ ಕೊಪ್ಪಳಕ್ಕೆ ಹೋಗುತ್ತೇವೆ ಇದರಲ್ಲಿ ಯಾವುದೇ ರಾಜಕೀಯ ವಿಚಾರ ಇಲ್ಲ. ರಾಜಕೀಯ ಮಾಡುವಾಗ ನಾನು ರಾಜಕೀಯ ಮಾಡುತ್ತೇವೆ, ಆದರೆ ನಾವಿಂದು ಅಭಿವೃದ್ಧಿ ದೃಷ್ಟಿಕೋನದಿಂದ ಕೆಲಸ ಮಾಡುವ ವಿಚಾರವಾಗಿ ಸೇರಿದ್ದೇವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಮುಂದೆ ಸಚಿವ ಸ್ಥಾನದ ಕುರಿತು ಮಾತನಾಡಿ. 'ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಇಲ್ಲ, ಆದರೆ ನಮ್ಮನ್ನು ಉಪಯೋಗಿಸಿಕೊಳ್ಳುತ್ತಿಲ್ಲವಲ್ಲ ಎಂಬ ಬೇಸರ ಇದೆ ಅಷ್ಟೇ. ನಾನು ಸದಾ ಕಾಲ ಕೆಲಸ ಮಾಡುವವನು ಸುಮ್ಮನೆ ಕುಳಿತುಕೊಳ್ಳುವವನಲ್ಲ. ಗದಗದಲ್ಲೂ ಒಂದು ಸಭೆ ಕರೆದಿದ್ದೇನೆ. ಅದರ ಬಗ್ಗೆ ಸಿಎಂಗೂ ಪತ್ರ ಬರೆದಿದ್ದಾರೆ. ಇದಕ್ಕಾಗಿ ಎರಡ್ಮೂರು ಸಲ ಎಂ‌ ಬಿ ಪಾಟೀಲರಿಗೆ ನೆನಪು ಮಾಡಿದ್ದೇನೆ. ಆದರೂ ಪ್ರತಿಕ್ರಿಯೆ ಬಂದಿಲ್ಲ, ಯಾಕೆಂದರೆ ಅವರು ಸಹ ಈಗ ಬ್ಯುಸಿ ಮ್ಯಾನ್. ಅದರ ಬಗ್ಗೆ ನಾನು ಹೇಳಿಕೊಳ್ಳಬಹುದಿತ್ತು. ಆದರೆ ಅದು ಹೇಳಿಕೊಂಡರೆ ಬೇರೆ ತರಹ ಅರ್ಥ ಮಾಡಿಕೊಳ್ಳುತ್ತಾರೆ ಅಂತಾ ಸುಮ್ಮನಾದೆ ಎಂದರು.

ಇನ್ನು ಶಾಸಕ ರಾಯರೆಡ್ಡಿ ಫಾರ್ಮ್ ಹೌಸ್​ಗೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್​ ಮಾತನಾಡಿದ್ದು, ರಾಯರೆಡ್ಡಿ ಸರ್ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕು, ನಮ್ಮ ಭೇಟಿಗೂ ಸಂಬಂಧ ಇಲ್ಲಾ. ರಾಯರೆಡ್ಡಿ ಸರ್ ಪತ್ರ ಬರೆದಿದ್ದು ಶಾಸಕರಿಗೆ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲವೆಂದು. ಅದಕ್ಕೆ ಬೇರೆ ಯಾವುದೇ ಅದರಲ್ಲಿ ಅರ್ಥ ಕಲ್ಪಿಸಬೇಕಿಲ್ಲ. ನಾವು ಬಂದಿದ್ದು ರಾಯರೆಡ್ಡಿ ಸಾಹೇಬರ ಕೋರಿಕೆಯ ಮೇಲೆ. ರಾಯರೆಡ್ಡಿ ಸರ್ ಬಹಳ ಅನುಭವಿ ರಾಜಕಾರಣಿ, ಪತ್ರ ಬರೆದಿದ್ದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ವಿದ್ಯುತ್ ಸಮಸ್ಯೆಗೆಗಾಗಿ ಕ್ಷೇತ್ರದ ರೈತರ ಒತ್ತಡ ಇದೆ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಜವಾಬ್ದಾರಿಯುತ ಶಾಸಕರಾಗಿ ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದರು.

ಆಡಳಿತ ಪಕ್ಷದ ಶಾಸಕರ ಮೇಲೆ ಬಹಳ ಭರವಸೆ ಇರುತ್ತೆ. ಸಿಎಂಗೆ ಪತ್ರ ಬರೆದರೆ ತಪ್ಪೇನಿಲ್ಲ, ಅದನ್ನು ಯಾಕೆ ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತಾರೆಂದು ಗೊತ್ತಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸ್ಪಂದಿಸಿಲ್ಲ. ಇಂಧನ ಸಚಿವರು ಹಾಗೂ ಸಿಎಂ ಕ್ರಮ‌ ತೆಗೆದುಕೊಳ್ಳಬೇಕು ಎಂದು ಸಭೆ ನಂತರ ತೀರ್ಮಾನ ಆಗಲಿದೆ ಎಂದರು.

ಈಶ್ವರಪ್ಪ ಆಪರೇಷನ್ ಬಿಜೆಪಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಇಂತಹ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ರಾಜಕಾರಣದಲ್ಲಿ ಇದು ಸರ್ವೆ ಸಾಮಾನ್ಯ. ಈಶ್ವರಪ್ಪ ಹಿರಿಯರು, ಅವರಿಗೆ ಟಿಕೆಟ್ ಕೊಡಲಿಲ್ಲ, ಅವರಿಗೆ ಪಕ್ಷ ಏನಾದರು ಕೊಡುವ ಬಗ್ಗೆ ಭರವಸೆ ನೀಡಿರಬೇಕು. ಅವರ ವರಿಷ್ಠರ ಗಮನ ಸೆಳೆಯಲು ಈಶ್ವರಪ್ಪ ಈ ರೀತಿ ಹೇಳಿಕೆ ಕೊಟ್ಟಿರಬೇಕು. ಅದಕ್ಕೆ ಹೆಚ್ಚು‌ ಪ್ರಾಮುಖ್ಯತೆ ಬೇಡ ಎಂದರು.

ಇದನ್ನೂ ಓದಿ: ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಮತ್ತೊಂದು ಪತ್ರ: ಸಮಸ್ಯೆ ಆಲಿಸದ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆಯುವಂತೆ ಮನವಿ

Last Updated : Sep 4, 2023, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.