ಹುಬ್ಬಳ್ಳಿ : ಧಾರವಾಡದ ಹಿರಿಯ ಸಾಹಿತಿ ಶಾಂತಾದೇವಿ ಕಣವಿ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಸಮನ್ವಯ ಕವಿ ಎಂದೇ ಹೆಸರಾಗಿರುವ ಚನ್ನವೀರ ಕಣವಿ ಅವರ ಬಾಳ ಸಂಗಾತಿಯಾಗಿ ಆದರ್ಶ ಬದುಕು ನಿರ್ವಹಿಸಿದ ಶಾಂತಾದೇವಿ ಅವರು, ಸ್ವತಃ ಕತೆಗಾರ್ತಿಯಾಗಿ ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ದೇವರು ಕುಟುಂಬದ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ನೀಡಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.