ETV Bharat / state

ಎಸ್‍ಡಿಎಂ ಆಸ್ಪತ್ರೆಗೆ ಸಚಿವ ಮುನೇನಕೊಪ್ಪ, ಜಗದೀಶ ಶೆಟ್ಟರ್​​ ಭೇಟಿ.. ಕವಿ ಚೆನ್ನವೀರ ಕಣವಿ ಆರೋಗ್ಯ ವಿಚಾರಣೆ - ಡಾ. ಚನ್ನವೀರ ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ

ಅಗತ್ಯವಿದ್ದಲ್ಲಿ ಕಿಮ್ಸ್ ಮತ್ತು ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರ ಸಲಹೆ, ನೆರವು ಪಡೆಯುವಂತೆ ಮತ್ತು ಡಾ. ಕಣವಿ ಅವರು ಬೇಗ ಚೇತರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ನೀಡುವಂತೆ ಅವರು ಮಾಜಿ ಸಿಎಂ ಶೆಟ್ಟರ್‌ ಸೂಚನೆ ನೀಡಿದರು..

Minister Sankara Patil Munenakoppa, Jagadeesha Shetter visit SDM Hospital
ಎಸ್‍ಡಿಎಂ ಆಸ್ಪತ್ರೆಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಗದೀಶ ಶೆಟ್ಟರ್​​ ಭೇಟಿ
author img

By

Published : Jan 31, 2022, 6:37 PM IST

ಧಾರವಾಡ : ಸಕ್ಕರೆ ಸಚಿವ ಶಂಕರ ಪಾಟೀಲ​​ ಮುನೇನಕೊಪ್ಪ ಮತ್ತು ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಧ್ಯಾಹ್ನ ನಗರದ ಎಸ್‍ಡಿಎಂ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ನಾಡೋಜ ಡಾ. ಚನ್ನವೀರ ಕಣವಿ ಅವರ ಆರೋಗ್ಯ ಕುರಿತು ಎಸ್‍ಡಿಎಂ ವೈದ್ಯರು ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​​ ಅವರು ಮಾತನಾಡಿ, ನಾಡೋಜ ಡಾ. ಚನ್ನವೀರ ಕಣವಿ ಅವರ ಆರೋಗ್ಯ, ಚಿಕಿತ್ಸೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಎಸ್‍ಡಿಎಂ ಆಸ್ಪತ್ರೆ ಉತ್ತಮ ತಜ್ಞ ವೈದ್ಯರನ್ನು ಮತ್ತು ಸೌಲಭ್ಯಗಳನ್ನು ಹೊಂದಿದೆ.

ಅಗತ್ಯವಿದ್ದಲ್ಲಿ ಕಿಮ್ಸ್ ಮತ್ತು ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರ ಸಲಹೆ, ನೆರವು ಪಡೆಯುವಂತೆ ಮತ್ತು ಡಾ. ಕಣವಿ ಅವರು ಬೇಗ ಚೇತರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ನೀಡುವಂತೆ ಅವರು ಸೂಚನೆ ನೀಡಿದರು.

Minister Sankara Patil Munenakoppa, Jagadeesha Shetter visit SDM Hospital
ಎಸ್‍ಡಿಎಂ ಆಸ್ಪತ್ರೆಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಗದೀಶ ಶೆಟ್ಟರ್​​ ಭೇಟಿ

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ, ನಾಡೋಜ ಡಾ. ಕಣವಿ ಅವರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿದೆ. ಚಿಕಿತ್ಸೆಗೆ ತಗಲುವ ಎಲ್ಲ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುತ್ತಿದೆ. ಉತ್ತಮ ಚಿಕಿತ್ಸೆಯನ್ನು ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ವೈದ್ಯರ ತಂಡಕ್ಕೆ ಸೂಚಿಸಿದರು.

ಇದನ್ನೂ ಓದಿ: ನಿಮ್ಮ ಪ್ರತಾಪಕ್ಕೆ ಹೆದರಿ ಓಡಿಹೋಗಲು ನಾನು ಸಂಸದೆ ಸುಮಲತಾ ಅಲ್ಲ: ಶಾಸಕನಿಗೆ ಕಾಳಿ ಮಠದ ಸ್ವಾಮೀಜಿ ಟಾಂಗ್​

ಡಾ. ಚನ್ನವೀರ ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ಮಾತನಾಡಿ, ಡಾ. ಕಣವಿ ಅವರ ಆರೋಗ್ಯದಲ್ಲಿ ಕಳೆದವಾರಕ್ಕಿಂತ ಈಗ ಚೇತರಿಕೆ ಕಂಡು ಬಂದಿದೆ. ರಕ್ತದೋತ್ತಡ (ಬಿಪಿ) ನಿಯಂತ್ರಣದಲ್ಲಿದ್ದು, ಕಿಡ್ನಿ ಕಾರ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ, ಪುಪ್ಪಸದ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದರು.

ಎಸ್‍ಡಿಎಂ ಆಸ್ಪತ್ರೆಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಗದೀಶ್ ಶೆಟ್ಟರ್​​ ಭೇಟಿ

ವಿವಿಧ ವಿಷಯಗಳ ವೈದ್ಯರಾದ ಶಾಶ್ವಕೋಶ ತಜ್ಞ ಡಾ. ಶ್ರೀಕಾಂತ ಹಿರೇಮಠ, ಅರವಳಿಕೆ ತಜ್ಞ ಡಾ. ಶ್ರೀರಂಗ ತೋರಗಲ್ಲ ಮತ್ತು ಜನರಲ್ ಫಿಜಿಷನ್ ಆದ ಡಾ. ರಾಜೇಂದ್ರ ಪಾರಿಕ್ ಅವರನ್ನು ಸೇರಿಸಿಕೊಂಡು ತಜ್ಞ ವೈದ್ಯರ ತಂಡ ರಚಿಸಲಾಗಿದ್ದು, ಡಾ. ಕಣವಿ ಅವರ ಆರೋಗ್ಯದ ಕುರಿತು ನಿರಂತರ ನಿಗಾವಹಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ತಿಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.