ಹುಬ್ಬಳ್ಳಿ : ಸ್ವಯಂ ಉದ್ಯೋಗ ಯೋಜನೆಯಡಿ ಬಾಬು ಜಗಜೀವನ್ ರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಡಿ ನಿರ್ಮಿಸಲಾದ ಸ್ವಾವಲಂಬಿ ಮಾರಾಟ ಮಳಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ನಗರದ ಟೌನ್‌ಹಾಲ್ ಎದುರಿನಲ್ಲಿ ಶಂಕರ ರಾಮದಾಸ್ ಕಾಮಟೆ ಅವರು ಲಿಡ್ಕರ್ ಅಡಿ ₹10 ಲಕ್ಷ ಅನುದಾನ ಪಡೆದು ಮಳಿಗೆ ನಿರ್ಮಿಸಿಕೊಂಡಿದ್ದರು. ಈ ಮಳಿಗೆ ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ವಾವಲಂಬಿ ಜೀವನ ನಡೆಸುವುದಕ್ಕೆ ಯುವಕರು ಮುಂದೆ ಬರಬೇಕು. ಸರ್ಕಾರ ಎಲ್ಲಾ ರೀತಿ ಸಹಾಯ ಮಾಡುವುದು. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನ, ಸ್ಥಳೀಯ ಉತ್ಪನ್ನಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬರ್ಗಿ, ಎಸ್. ರುದ್ರೇಶ್ ಸೇರಿ ಇತರ ಮುಖಂಡರು ಹಾಜರಿದ್ದರು.