ಹುಬ್ಬಳ್ಳಿ: ಸಚಿವ ಜಗದೀಶ್ ಶೆಟ್ಟರ್ ತಾಯಿ ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ (87) ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಇವರು ಹಲವಾರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಕ್ಕನ ಬಳಗದಲ್ಲಿ ಸಕ್ರಿಯರಾಗಿದ್ದರು. ಕೇಶ್ವಾಪುರದ ಶಬರಿ ನಗರದಲ್ಲಿ ಇನ್ನೊಬ್ಬ ಪುತ್ರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ನಿವಾಸದಲ್ಲಿದ್ದ ಅವರಿಗೆ ಇಂದು ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. ಕೊನೆಗೆ ಹೃದಯಾಘಾತದಿಂದ ಅವರು ವಿಧಿವಶರಾಗಿದ್ದಾರೆ.
ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ತಮ್ಮ ಪುತ್ರರಾದ ಸಚಿವ ಜಗದೀಶ್ ಶೆಟ್ಟರ್ ಮತ್ತು ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದಾರೆ.