ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸಚಿವರ ಜನಸಂಪರ್ಕ ಕಚೇರಿಯಲ್ಲಿ ಧಾರವಾಡ ಡಿಎಫ್‌ಒ ಮಹೇಶಕುಮಾರ ಮತ್ತು ವಲಯ ಅರಣ್ಯಾಧಿಕಾರಿ ವಿಜಯಕುಮಾರಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ಅರಣ್ಯ ಸ್ಮಗಲಿಂಗ್ ಮಾಡೋರನ್ನು ಬೇಕಾದ್ರೆ ಫೈರ್ ಮಾಡಿ ನಾನು ಕೇಳಲ್ಲ. ಆದರೆ ಬಡವರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದರು.
3 ಎಕರೆಯೊಳಗೆ ಭೂಮಿ ಇರೋರನ್ನು ಒಕ್ಕಲೆಬ್ಬಿಸಬಾರದು ಅಂತಾ ಹಿಂದಿನ ಸಿದ್ದರಾಮಯ್ಯ ಸರ್ಕಾರವೇ ಆದೇಶ ನೀಡಿದೆ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡೋದು ಗೊತ್ತಿಲ್ವಾ ನಿಮಗೆ ಎಂದು ದಬಾಯಿಸಿದರು.
ಕಲಘಟಗಿ, ಕಿವಡೆಬೈಲ್ ಕಡೆ ಜನರೆಲ್ಲ ಪ್ರತಿದಿನ ನನ್ನ ಮನೆಗೆ ಬರ್ತಾ ಇದ್ದಾರೆ. ಸರ್ಕಾರದ ಆದೇಶ ಪಾಲಿಸೋದು ಗೊತ್ತಿಲ್ಲ ಅಂದ್ರೆ ನಿನಗೆ ಓದೋಕೆ, ಬರಿಯೋಕೆ ಬರಲ್ವೇನು?. ಬೇರೆಯವರ ಜೊತೆ ವರ್ತಿಸಿದಂತೆ ನನ್ನ ಜೊತೆ ವರ್ತಿಸಬೇಡಿ. ಬಡವರಿಗೆ ಕೈ ಹಚ್ಚಿದ್ರೆ ನಾನು ಸುಮ್ಮನೆ ಬಿಡುವುದಿಲ್ಲ. ಹುಡುಗಾಟಿಕೆ ಮಾಡೋಕೆ ಹೋಗಬೇಡಿ ಅಂತ ಖಡಕ್ ಸೂಚನೆ ಕೊಟ್ಟಿದ್ದಾರೆ.
ಅರಣ್ಯ ವಲಯಧಿಕಾರಿ ವಿಜಯದ ಕುಮಾರ್ಗೆ ನೀನು ಹೋದ ಕಡೆಯಲ್ಲಿ ಗಲಾಟೆ ಮಾಡ್ತಿಯಾ. ವಿಚಾರ ಮಾಡಿನೋಡು. ಹಿಂದೆಯೂ ಇದೇ ರೀತಿ ಮಾಡಿ ಇಲ್ಲಿ ಬಂದಿದೀಯಾ. ಇಲ್ಲಿಯೂ ಅದೇ ಸಮಸ್ಯೆ ಮಾಡ್ತಾ ಹೋದ್ರೆ ನಾನು ಸುಮ್ಮನೆ ಬಿಡಲ್ಲ ಅಂತಾ ವಲಯ ಅರಣ್ಯಾಧಿಕಾರಿ ವಿಜಯಕುಮಾರಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ.