ETV Bharat / state

ಬಿಸಿಯೂಟ, ಹಾಸ್ಟೆಲ್​ ಊಟದಲ್ಲಿ ಸಿರಿಧಾನ್ಯ ಆಹಾರ ನೀಡಲು ತೀರ್ಮಾನ: ಬಿ.ಸಿ. ಪಾಟೀಲ - ಕೃಷಿ ಸಚಿವರಾದ ಬಿ.ಸಿ.ಪಾಟೀಲ್

ಬಿಸಿಯೂಟದಲ್ಲಿ ಹಾಗೂ ಹಾಸ್ಟೆಲ್​ಗಳಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಸಿರಿಧಾನ್ಯಗಳ ಬೆಲೆ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ. ಈಗಾಗಲೇ ಕೃಷಿ ವಿವಿ ಗಳ ಹಾಸ್ಟೆಲ್​ಗಳಲ್ಲಿ ವಾರದಲ್ಲಿ ಒಂದು ದಿನ ಮಧ್ಯಾಹ್ನ ಊಟದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಆಹಾರ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ.

minister bc patil talk
ಬಿ.ಸಿ.ಪಾಟೀಲ್
author img

By

Published : Feb 28, 2021, 8:21 PM IST

ಹುಬ್ಬಳ್ಳಿ: ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಹಾಗೂ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರದಿಂದ ನಡೆಸುತ್ತಿರುವ ಹಾಸ್ಟೆಲ್​ಗಳು ಹಾಗೂ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಸಿರಿಧಾನ್ಯಗಳ ಆಹಾರ ನೀಡಲು‌ ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಓದಿ: ಯೂಟ್ಯೂಬ್​ ನೋಡಿ ದರೋಡೆಗೆ ಮಾಸ್ಟರ್​​ ಪ್ಲಾನ್​.. ಅಷ್ಟೆಲ್ಲಾ ಮಾಡಿದ್ರೂ ನಡೀಲಿಲ್ಲ ಆಟ..

ಮೊರಬದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ದಾಸ್ತಾನು ಮಳಿಗೆ, ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರ ಹಾಗೂ ಕೃಷಿಯಂತ್ರಧಾರೆ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿರಿಧಾನ್ಯ ಪ್ರೋತ್ಸಾಹಿಸುವ ಕುರಿತು ಆಯವ್ಯಯ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಸಿಯೂಟದಲ್ಲಿ ಹಾಗೂ ಹಾಸ್ಟೆಲ್​ಗಳಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಸಿರಿಧಾನ್ಯಗಳ ಬೆಲೆ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ. ಈಗಾಗಲೇ ಕೃಷಿ ವಿವಿ ಗಳ ಹಾಸ್ಟೆಲ್​ಗಳಲ್ಲಿ ವಾರದಲ್ಲಿ ಒಂದು ದಿನ ಮಧ್ಯಾಹ್ನ ಊಟದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಆಹಾರ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ. ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

minister bc patil talk
ಬಿ.ಸಿ.ಪಾಟೀಲ್

ನೋಂದಣಿ ಜೊತೆಗೆ ಖರೀದಿಯನ್ನು ಸಹ ಆರಂಭಿಸಲಾಗಿದೆ. ತಡ ಮಾಡದೆ ರೈತರ ಖಾತೆ ಹಣ ಜಮೆ ಮಾಡಲಾಗುವುದು. ಕ್ವಿಂಟಲ್​ಗೆ ರೂ.5100 ದರ ನಿಗದಿ ಮಾಡಲಾಗಿದೆ. ಮೂರು ತಿಂಗಳು ಖರೀದಿ ಕೇಂದ್ರದಲ್ಲಿ ಕಡಲೆಕಾಳು ಖರೀದಿಸಲಾಗುವುದು. ಯಂತ್ರಧಾರೆ ಯೋಜನೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜೊತೆಗೆ ಹಲವು ಸಂಸ್ಥೆಗಳು ಸಹ ನಿರ್ವಹಿಸುತ್ತವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ.

minister bc patil talk
ಬಿ.ಸಿ.ಪಾಟೀಲ್

ಖರೀದಿಸುವ ಯಂತ್ರಗಳಿಗೆ ಕೃಷಿ ಇಲಾಖೆಯಿಂದ ಶೇ 70 ರಷ್ಟು ಸಹಾಯಧನ ನೀಡಲಾಗುತ್ತದೆ. ರೈತರಿಗೆ ಬೆ:ಎ ಕಟಾವು ಮಾಡುವಲ್ಲಿ ತಗುಲುವ ವೆಚ್ಚ ಯಂತ್ರಗಳಿಂದ ಕಡಿಮೆಯಾಗುತ್ತದೆ. ಗೋಧಿ ಕಟಾವಿಗೆ ರೂ. 6000 ವೆಚ್ಚವಾದರೆ, ಯಂತ್ರಾಧಾರಿತ ಕಟಾವಿಗೆ ರೂ.1200 ತಗಲುತ್ತಿದೆ. ರೂ.4800 ರೈತರಿಗೆ ಉಳಿತಾಯವಾಗುತ್ತದೆ. ಪ್ರಸಕ್ತ ವರ್ಷದಿಂದ ಫಾರಂ ಬ್ಯಾಂಕ್ ಆರಂಭಿಸಿ 20 ಜನರ ಕೃಷಿ ಕೋ ಆಪರೇಟಿವ್ ಸೊಸೈಟಿಗೆ ಟ್ರ್ಯಾಕ್ಟರ್ ಖರೀದಿಗೆ ರೂ.8‌ ಲಕ್ಷ ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಹಳ್ಳಿಗೊಂದು ಕೃಷಿಯಂತ್ರಧಾರೆಯನ್ನು ಆರಂಭಿಸಲಾಗುವುದು. ಕೃಷಿ ಮಿತ್ರ ನೇಮಕಾತಿ ಕುರಿತು ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಮಂಡಿಸಲಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.