ETV Bharat / state

ಕೊರೊನಾ ಹರಡದಂತೆ ಹುಬ್ಬಳ್ಳಿ, ಧಾರವಾಡದಲ್ಲಿ ರಾಸಾಯನಿಕ ಸಿಂಪಡಣೆ - corona in karanataka

ಹುಬ್ಬಳ್ಳಿ- ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಣೆ ಕಾರ್ಯ ಭರದಿಂದ ಸಾಗಿದೆ.

metropolitan strict action against corona spread
ಹು-ಧಾ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ
author img

By

Published : Mar 25, 2020, 1:11 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವನ್ನು‌ ಕೈಗೊಳ್ಳುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಣೆ ಕಾರ್ಯ ಭರದಿಂದ ಸಾಗಿದೆ. ಮಹಾನಗರ ‌ಪಾಲಿಕೆ ಹಾಗೂ ಸಾರ್ವಜನಿಕರು ಹಂತ ಹಂತವಾಗಿ ಎಚ್ಚೆತ್ತುಕೊಳ್ಳುತ್ತಿದ್ದಾರೆ‌.‌ ನಗರದ ಜೋನಲ್ ನಂಬರ್ 10 ರಲ್ಲಿ ಮೆಡಿಕಲ್ ಶಾಪ್ ಮುಂದೆ ಬಾಕ್ಸ್ ಗಳನ್ನು ಹಾಕಲಾಗಿದ್ದು, ಗ್ರಾಹಕರು‌ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಲಾಗುತ್ತಿದೆ.

ಹು-ಧಾ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ

ನಿನ್ನೆ ಮಳೆ ಸುರಿದ ಪರಿಣಾಮ ಹೈಪೋ ಕ್ಲೋರೈಡ್ ದ್ರಾವಣ ನೀರಿನಲ್ಲಿ ‌ಕೊಚ್ಚಿ ಹೋಗಿತ್ತು. ಹೀಗಾಗಿ ನಗರದ ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ, ಜನತಾ ಮಾರುಕಟ್ಟೆ, ಕೊಪ್ಪಿಕರ್ ರಸ್ತೆ ಸೇರಿದಂತೆ ಹಲವು ಕಡೆ ಸಿಂಪಡಣೆ ಮಾಡಲಾಗುತ್ತಿದೆ. ರಸ್ತೆಯ ಪಕ್ಕ ಸಿಂಪಡಣೆ ಮಾಡಿ ವೈರಸ್ ಹರಡದಂತೆ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ ಕ್ರಮಕೈಗೊಂಡಿದೆ. ಅದಲ್ಲದೆ ಅಗತ್ಯ ವಸ್ತುಗಳನ್ನು ‌ಹೊತ್ತುಕೊಂಡು ನಗರಕ್ಕೆ ಆಗಮಿಸುವ ವಾಹನಗಳನ್ನು ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.