ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಆತಂಕ ಉಂಟುಮಾಡುತ್ತಿರುವ ಕೊರೊನಾ ವೈರಸ್ ತಗುಲದಿರಲಿ ಎಂಬ ಉದ್ದೇಶದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ನಗರದ ಪುನೀತ್ರಾಜಕುಮಾರ್ ಅಭಿಮಾನಿಗಳು ಮೂರುಸಾವಿರ ಮಠದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು.
ಕಾರ್ಯಕ್ರಮಕ್ಕೆ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಇದೇ ವೇಳೆ ಮೂರು ಸಾವಿರ ಮಠಕ್ಕೆ ಆಗಮಿಸಿದ ನೂರಾರು ಭಕ್ತಾಧಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ಮಕ್ಕಳು,ಮಹಿಳೆಯರು ಹಾಗೂ ವೃದ್ಧರು ಮಾಸ್ಕ್ ಪಡೆದುಕೊಂಡು ಅಪ್ಪು ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.