ETV Bharat / state

ಮಹದಾಯಿ ಯೋಜನೆ: ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಸೊಬರದಮಠ ಆಗ್ರಹ - latest updates of mahadayi scheme

ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಯಾವ ಕ್ರಮ ಕೈಕೊಂಡಿದ್ದಾರೆಂಬ ಮಾಹಿತಿಯನ್ನು ರಾಜ್ಯದ ಜನತೆಗೆ 15 ದಿನಗಳೊಳಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಹೈಕೋರ್ಟ್​ನಲ್ಲಿ ರಾಜ್ಯಪಾಲರ ಮುಖ್ಯ ಕಾರ್ಯದರ್ಶಿ ವಿರುದ್ಧ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಎಚ್ಚರಿಕೆ ರವಾನಿಸಿದ್ದಾರೆ.

ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಆಗ್ರಹ : ವಿರೇಶ ಸೊಬರದಮಠ
author img

By

Published : Nov 22, 2019, 2:42 PM IST

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಯಾವ ಕ್ರಮ ಕೈಕೊಂಡಿದ್ದಾರೆಂಬ ಮಾಹಿತಿಯನ್ನು ರಾಜ್ಯದ ಜನತೆಗೆ 15 ದಿನಗಳೊಳಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಹೈಕೋರ್ಟ್​ನಲ್ಲಿ ರಾಜ್ಯಪಾಲರ ಮುಖ್ಯ ಕಾರ್ಯದರ್ಶಿ ವಿರುದ್ಧ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಎಚ್ಚರಿಕೆ ರವಾನಿಸಿದ್ದಾರೆ.

ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಆಗ್ರಹ : ವೀರೇಶ್ ಸೊಬರದಮಠ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ರಾಜ್ಯಪಾಲರು ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿ ಕಳೆದ ತಿಂಗಳು ಲಕ್ಷಾಂತರ ಪತ್ರಗಳಿಗೆ ಸಹಿ ಮಾಡಿಸಿ ಕಳಿಸಿಕೊಡುವ ಮೂಲಕ ಪತ್ರ ಚಳವಳಿ ಸೇರಿದಂತೆ ರೈತ ಸೇನಾ ಕರ್ನಾಟಕದ 4 ಜಿಲ್ಲೆಯ 11 ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಅ.17 ರಂದು ರಾಜ್ಯಪಾಲರನ್ನು ಭೇಟಿ ಹಿನ್ನಲೆಯಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ಮುಂಭಾಗದಲ್ಲಿ ಮೂರು ದಿನಗಳವರೆಗೆ ಹಗಲು ರಾತ್ರಿ ಎನ್ನದೇ ನಿರಂತರ ಹೋರಾಟ ಮಾಡಿದ್ದೆವು. ಹಾಗಾಗಿಯೂ ಕೂಡಾ ರಾಜ್ಯಪಾಲರು ತಮ್ಮ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದರೇ ಹೊರತು ರೈತರನ್ನು ಭೇಟಿ ಆಗಲಿಲ್ಲ. ಈ ಹಿನ್ನಲೆಯಲ್ಲಿ ಮನವಿ ಸಲ್ಲಿಸಿ ಹಲವು ದಿನಗಳೇ ಕಳೆಯುತ್ತಾ ಬಂದಿದ್ದು, ಈ ಬಗ್ಗೆ ಅವರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸೂಕ್ತ ಮಾಹಿತಿಯೊಂದಿಗೆ ತಿಳಿಸಬೇಕು. ಇಲ್ಲವಾದರೆ ರಿಟ್ ಅರ್ಜಿ ಹಾಕಲಾಗುವುದು ಎಂದರು.

ಸಮಿತಿ ರಚನೆ ಬೇಡ: ರಾಜ್ಯದ ಮೂರು ಪಕ್ಷಗಳು ಮಹದಾಯಿ ವಿಚಾರವನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಯಾರೊಬ್ಬರು ಪ್ರಯಾಣಿಕವಾಗಿ ಪ್ರಯತ್ನ ಮಾಡಿಲ್ಲ. ಅಲ್ಲದೇ ರಾಜ್ಯದ ನೀರಾವರಿ ತಜ್ಞರು, ಅಧಿಕಾರಿಗಳು ಪಿಡಿಆರ್ ತಯಾರಿಸಿ ರಾಜ್ಯಕ್ಕೆ ನೀರು ತರುವಂತೆ ಮಾಡಿದರು. ಅದನ್ನು ರಾಜ್ಯದ ರಾಜಕಾರಣಿಗಳು ತಾವೇ ತಂದಿದ್ದೇವೆ ಎಂದು ಬಿಂಬಿಸಿಕೊಂಡು ಗೋವಾದ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದರು. ಪರಿಣಾಮ ಗೋವಾದ ಜನರು ಸರ್ಕಾರದ ಮೇಲೆ ಒತ್ತಡ ಹಾಕಿ ಮಹದಾಯಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆಯುವುವಂತೆ ಮಾಡಿದರು. ಇದರಿಂದಾಗಿ ಕೇಂದ್ರದ ನೀರಾವರಿ ಸಚಿವ ಪ್ರಕಾಶ್​ ಜಾವಡೇಕರ ಅವರು ಮಹದಾಯಿ ವಿಚಾರವಾಗಿ ಸಮಿತಿ ರಚನೆಗೆ ನಿರ್ಧರಿಸಿರುವುದು, ಮತ್ತಷ್ಟು ವಿಳಂಬ ಧೋರಣೆ ಅನುಸರಿಸುವ ನಿಲುವು ಎಂದು ಸೊಬರದಮಠ ಆರೋಪಿಸಿದರು.

ರಾಜಕಾರಣಿಗಳಿಗೆ ಎಚ್ಚರಿಕೆ: ಮಹದಾಯಿ ಅಚ್ಚುಕಟ್ಟಿನ ಶಾಸಕರು, ಸಚಿವರು, ಸಂಸದರು ರಾಜ್ಯ ಅಥವಾ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕಿ ಕೂಡಲೇ ಗೆಜೆಟ್ ನೋಟಿಫಿಕೇಶನ್​ ಹೊರಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಸತ್​ ಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ಹೋರಾಟಗಾರ ತಿಳಿಸಿದರು.

ಡಿ.ಕೆ.ಶಿ.ಗೆ ತಿರುಗೇಟು: ಹಿಂದಿನ ಸರ್ಕಾರ ಇದ್ದಾಗ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಮಹದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮೂರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದೀಗ ಅಧಿಕಾರ ಕಳೆದಕೊಂಡ ನಂತರ ಮಹದಾಯಿ ವಿಚಾರವಾಗಿ ಮಾತನಾಡುತ್ತಿರುವುದು ಖಂಡನೀಯ. ರಾಜಕಾರಣಿಗಳು ಬಿಟ್ಟಿ ಪ್ರಚಾರ ಬಿಟ್ಟು ರೈತರ ಬೆಂಬಲಕ್ಕೆ ನಿಲ್ಲಬೇಕೆಂದು ತಿರುಗೇಟು ನೀಡಿದ್ರು.

Intro:ಹುಬ್ಬಳ್ಳಿ-02

ಮಹದಾಯಿ ಯೋಜನೆ ಜಾರಿ ಕುರಿತಂತೆ ಗೆಜೆಟ್ ನೋಟಿಫೀಕೇಶನ್ ಹೊರಡಿಸುವಂತೆ ರಾಜ್ಯದ ರಾಜ್ಯಪಾಲರ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಈ ಬಗ್ಗೆ ಯಾವ ಕ್ರಮ ಕೈಕೊಂಡಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಜನತೆಗೆ 15 ದಿನಗಳ ಒಳಗಾಗಿ ತಿಳಿಸಬೇಕು ಇಲ್ಲದೇ ಹೋದರೆ ಹೈಕೋರ್ಟ್ ನಲ್ಲಿ ರಾಜ್ಯಪಾಲರ ಮುಖ್ಯ ಕಾರ್ಯದರ್ಶಿ ವಿರುದ್ದ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ರಾಜ್ಯಪಾಲರು ಗೆಜೆಟ್ ನೋಟಿಫೀಕೇಶನ್ ಹೊರಡಿಸುವಲ್ಲಿ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿ ಕಳೆದ ತಿಂಗಳು ಲಕ್ಷಾಂತರ ಪತ್ರಗಳಿಗೆ ಸಹಿ ಮಾಡಿಸಿ ಕಳಿಸಿಕೊಡುವ ಮೂಲಕ ಪತ್ರ ಚಳುವಳಿ, ಸೇರಿದಂತೆ ರೈತ ಸೇನಾ ಕರ್ನಾಟಕದ 4 ಜಿಲ್ಲೆಯ 11 ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಅ.17 ರಂದು ರಾಜ್ಯಪಾಲರನ್ನು ಭೇಟಿ ಹಿನ್ನಲೆಯಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ಮುಂಭಾಗದಲ್ಲಿ ಮೂರು ದಿನಗಳವರೆಗೆ ಹಗಲು ರಾತ್ರಿ ಎನ್ನದೇ ನಿರಂತರ ಹೋರಾಟ ಮಾಡಿದರೂ ಕೂಡಾ ರಾಜ್ಯಪಾಲರು ತಮ್ಮ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದರು ಹೊರತು ರೈತರನ್ನು ಭೇಟಿ ಆಗಲಿಲ್ಲ. ಈ ಹಿನ್ನಲೆಯಲ್ಲಿ ಮನವಿ ಸಲ್ಲಿಸಿ ಹಲವಾರು ದಿನಗಳು ಕಳೆಯುತ್ತಾ ಬಂದಿದ್ದು, ರಾಜ್ಯಪಾಲರು ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಸೂಕ್ತ ಮಾಹಿತಿಯೊಂದಿಗೆ ತಿಳಿಸಬೇಕು. ಇಲ್ಲವಾದರೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಿತಿ ರಚನೆ ಬೇಡ:

ಇನ್ನೂ ರಾಜ್ಯದ ಮೂರು ಪಕ್ಷಗಳು ಮಹದಾಯಿ ವಿಚಾರವನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಯಾರೊಬ್ಬರು ಪ್ರಯಾಣಿಕವಾಗಿ ಪ್ರಯತ್ನ ಮಾಡಿಲ್ಲ. ಅಲ್ಲದೇ ರಾಜ್ಯದ ನೀರಾವರಿ ತಜ್ಞರು, ಅಧಿಕಾರಿಗಳು ಪಿಡಿಆರ್ ತಯಾರಿಸಿ ರಾಜ್ಯಕ್ಕೆ ನೀರು ತರುವಂತೆ ಮಾಡಿದರು. ಅದನ್ನು ರಾಜ್ಯದ ರಾಜಕಾರಣಿಗಳು ತಾವೇ ತಂದಿದ್ದೇವೆ ಎಂದು ಬಿಂಬಿಸಿಕೊಂಡು ಗೋವಾದ ಜನರ ಕಂಗೇಣಿಗೆ ಗುರಿಯಾಗುವಂತೆ ಮಾಡಿದರು. ಪರಿಣಾಮ ಗೋವಾದ ಜನರು ಸರ್ಕಾರದ ಮೇಲೆ ಒತ್ತಡ ಹಾಕಿ ಮಹದಾಯಿ ವಿಚಾರವಾಗಿ ಮತ್ತೆ ತಗಾದೆ ತೆಗೆಯುವುವಂತೆ ಮಾಡಿದರು. ಇದರಿಂದಾಗಿ ಕೇಂದ್ರದ ನೀರಾವರಿ ಸಚಿವ ಪ್ರಕಾಶ ಜಾವಡೇಕರ ಅವರು ಮಹದಾಯಿ ವಿಚಾರವಾಗಿ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಿದ್ದು, ಇದರಿಂದಾಗಿ ಮಹದಾಯಿ ಬಗ್ಗೆ ಮತ್ತಷ್ಟು ವಿಳಂಬ ಧೋರಣೆ ಅನುಸರಿಸುವ ನಿಲುವು ಇದಾಗಿದ್ದು ಇದು ರಾಜಕೀಯ ಷಡ್ಯಂತ್ರವಾಗಿದೆ.‌ ಸರ್ಕಾರಗಳು ರೈತರನ್ನು ಕೊಲ್ಲೋ ಕೆಲಸ ಮಾಡುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.

ರಾಜಕಾರಣಿಗಳಿಗೆ ಎಚ್ಚರಿಕೆ:

ಮಹದಾಯಿ ವಿಚಾರವಾಗಿ ಮಹದಾಯಿ ಅಚ್ಚುಕಟ್ಟಿನ ಶಾಸಕರು, ಸಚಿವರು, ಸಂಸದರು ರಾಜ್ಯ ಅಥವಾ ಕೇಂದ್ರ ಸರ್ಕಾರ ಮೇಲೆ ಒತ್ತಡ ಹಾಕಿ ಕೂಡಲೇ ಗೆಜೆಟ್ ನೋಟಿಫೀಕೇಶನ್ ಹೊರಡಿಸಲು ಹೊರಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್ ಗೆ ಮುತ್ತಿಗೆ ಹಾಕಿ ರಕ್ತ ಹರಿಸಿ ನೀರು ತರಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿ.ಕೆ.ಶಿಗೆ ತಿರುಗೇಟು:

ಕಳೆದ ಹಿಂದಿನ ಸರ್ಕಾರ ಇದ್ದಾಗ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರಿಗೆ ಮಹದಾಯಿ ವಿಚಾರವಾಗಿ ಗೆಜೆಟ್ ನೋಟಿಫೀಕೇಶನ್ ಹೊರಡಿಸುವಂತೆ ಮೂರು ಬಾರಿ ಮನವಿ ಸಲ್ಲಿಸಿದರು. ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದೀಗ ಅಧಿಕಾರ ಕಳೆದಕೊಂಡ ನಂತರ ಮಹದಾಯಿ ವಿಚಾರವಾಗಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ. ಅಲ್ಲದೇ ರಾಜ್ಯದ ರಾಜಕಾರಣಿಗಳು ಒಬ್ಬರ ಮೇಲೆ ಇನ್ನೊಬ್ಬರು ಹಾಕಿ ಮಹದಾಯಿ ವಿಚಾರವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟು ರೈತರ ಬೆಂಬಲಕ್ಕೆ ನಿಲ್ಲಬೇಕೆಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಸದಸ್ಯ ಫಕ್ಕಿರಪ್ಪ ಜೋಗಣ್ಣವರ, ಗುರು ರಾಯನಗೌಡ್ರ, ವರುಣಗೌಡ ಪಾಟೀಲ, ಮಲ್ಲಣ್ಣ, ಶಿವನಗೌಡ ಹಿರೇಗೌಡ್ರ ಇದ್ದರು.

ಬೈಟ್ - ವಿರೇಶ ಸೊಬರದಮಠ, ರೈತ ಸೇನಾ ರಾಜ್ಯಾಧ್ಯಕ್ಷBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.