ETV Bharat / state

ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ - ಹುಬ್ಬಳ್ಳಿ

ಹಣದ ವಿಚಾರವಾಗಿ ಮಾತಿಗೆ ಮಾತಿ ಬೆಳೆದು ಅಣ್ಣನಿಗೆ ತಮ್ಮ ಚಾಕುವಿನಿಂದ ಇರಿದ ಘಟನೆ ನಡೆದಿದೆ.

hubli
ಹಣದ ವಿಚಾರಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ
author img

By

Published : Apr 21, 2021, 8:50 AM IST

ಹುಬ್ಬಳ್ಳಿ: ಹಣದ ವಿಚಾರಕ್ಕಾಗಿ ಸಹೋದರನಿಗೆ ಚಿಕ್ಕಪ್ಪನ ಮಗ ಚಾಕುವಿನಿಂದ ಇರಿದ ಘಟನೆ ಈಶ್ವರ ನಗರದಲ್ಲಿ ನಡೆದಿದೆ.

ಸುನೀಲ್​ ಕೃಷ್ಣಾ ಘಾಟೇಕರ ಇರಿತಕ್ಕೊಳಗಾದ ಯುವಕ. ಈತನ ಚಿಕ್ಕಪ್ಪನ ಮಗ ಮಂಜು ಚಾಕು ಇರಿದಾತ. ಮದುವೆಗೆ ಹಣ ನೀಡುವಂತೆ ಸುನೀಲನನ್ನು ಮಂಜು ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಮಾತಿಗೆ ಮಾತಿ ಬೆಳೆದು ಸುನೀಲ್​ಗೆ ಮಂಜು ಚಾಕುವಿನಿಂದ ಬೆನ್ನು ಮತ್ತು ದೇಹದ ಇತರೆಡೆ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗ್ತಿದೆ.

ಸುನೀಲ್​ನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.