ETV Bharat / state

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ... ದುಷ್ಕರ್ಮಿಗಳು ಎಸ್ಕೇಪ್

author img

By

Published : Nov 11, 2022, 8:54 AM IST

Updated : Nov 11, 2022, 8:11 PM IST

ರೈಲಿನಲ್ಲಿಯೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ರೈಲು
ರೈಲು

ಹುಬ್ಬಳ್ಳಿ: ತಿರುಪತಿ, ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಆಂಧ್ರಪ್ರದೇಶದ ಮೂಲದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆ ಗುರುವಾರ ತಡರಾತ್ರಿ ನಡೆದಿದೆ. ರೈಲು ಹುಬ್ಬಳ್ಳಿಯ ಬ್ಯಾಹಟ್ಟಿಗೆ ಬಂದಾಗ ರೈಲು ಸಿಬ್ಬಂದಿ ಆ ಬೋಗಿಯನ್ನು ಪ್ರತ್ಯೇಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಬ್ಯಾಹಟ್ಟಿಯಲ್ಲೇ ರೈಲು ನಿಲ್ಲಿಸಿದ್ದಾರೆ.

ಆಂಧ್ರಪ್ರದೇಶದ ಆಧೋನಿ ನಿವಾಸಿ ಆಂಜನೇಯ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ‌. ಕೆಲಸಕ್ಕೆಂದು ಹುಬ್ಬಳ್ಳಿಗೆ ಬರುವುದಕ್ಕಾಗಿ ಗುಂತಕಲ್​ನಲ್ಲಿ ಇವರು ರೈಲು ಹತ್ತಿದ್ದರು. ಇನ್ನೇನು ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕು ಅನ್ನುವಷ್ಟರಲ್ಲೇ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆಗೈದು, ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಮೊಬೈಲ್‌ ಚಾರ್ಜಿಂಗ್ ವಿಚಾರಕ್ಕೆ ವ್ಯಕ್ತಿ ಕೊಲೆ; 24 ಗಂಟೆಯಲ್ಲಿ ಆರೋಪಿ ಸೆರೆ

ಹುಬ್ಬಳ್ಳಿ ರೈಲ್ವೆ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೊಲೆ ಉಪಯೋಗಿಸಿದ್ದ ಚಾಕು ವಶಕ್ಕೆ ಪಡೆದರು. ಕೊಲೆಗೆ ಹಳೆ ದ್ವೇಷ ಕಾರಣ ಎನ್ನಲಾಗಿದ್ದು ಗುಂತಕಲ್​​ನಿಂದ ಫಾಲೋ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಕೊಲೆಯಾದ ಆಂಜನೇಯ ಬಳಿ ಬ್ಯಾಗ್ ಇದ್ದು, ಹಣ ದೋಚಿ ಕೊಲೆ ಮಾಡಿರುವ ಅನುಮಾನವೂ ವ್ಯಕ್ತವಾಗಿದೆ.

ಕೇವಲ 5 ನಿಮಿಷ ಕಳದಿದ್ರೆ ಆಂಜನೇಯ ಇಳಿದು ತನ್ಮ ಕೆಲಸಕ್ಕೆ ಹೋಗುತ್ತಿದ್ದರು. ಆದ್ರೆ ಅಷ್ಟರಲ್ಲಿಯೇ ಕೊಲೆಯಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಆರಂಭಿಸಿದ್ದಾರೆ.

Last Updated : Nov 11, 2022, 8:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.