ಧಾರವಾಡ: ಸತತ 2 ದಿನಗಳಿಂದ ಸುರಿದ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಕೋಟೂರ ಗ್ರಾಮದಲ್ಲಿ ನಡೆದಿದೆ.
ಖಾದರ್ ಭಾಷಾ ಖುರೇಶಿ (40) ಮೃತ ವ್ಯಕ್ತಿ. ಹುಬ್ಬಳ್ಳಿ ಮೂಲದವನಾದ ಈತ ಕೋಟೂರು ಗ್ರಾಮದಲ್ಲಿರುವ ಪತ್ನಿಯ ಮನೆಗೆ ಬಂದು 18 ರಿಂದ 20 ವರ್ಷಗಳಾಗಿದ್ದವು. ನಿನ್ನೆ ಹಳ್ಳ ದಾಟುತ್ತಿದ್ದ ವೇಳೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ.
ವಿಷಯ ತಿಳಿದು ಅಗ್ನಿಶಾಮಕ ದಳ ಹಾಗೂ ಗರಗ ಠಾಣೆ ಪೊಲೀಸರು ಈತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಇಂದು ಮತ್ತೆ ಕಾರ್ಯಾಚರಣೆ ಮುಂದುವರೆಸಿದ ವೇಳೆ ಭಾಷಾ ಸಾಬ್‌ನ ಮೃತ ದೇಹ ಮುಳ್ಳಿನ ಕಂಟಿಯಲ್ಲಿ ಪತ್ತೆಯಾಗಿದೆ.
ಸದ್ಯ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಅವಾಂತರ ಸೃಷ್ಟಿಸಿದ ವರುಣ: ಮಳೆ ಮುಂದುವರಿಯೋ ಸಾಧ್ಯತೆ