ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮಕನಾದ ಮಾಲಿಂಗಶಾವಲಿ ಬಾಬಾ ವಿಧಿವಶರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಹಿಂದೂ - ಮುಸ್ಲಿಂ ಧರ್ಮದವರು ಒಂದಾಗಿ ನೆರವೇರಿಸಿ ಭಾವೈಕ್ಯತೆ ಮೆರೆದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಮಹಾಸ್ವಾಮಿಗಳು, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಮಹಾಸ್ವಾಮಿಗಳು ಅಂತಿಮ ದರ್ಶನ ಪಡೆದ ಬಳಿಕ ಪಾರ್ಥಿವ ಶರೀರವನ್ನು ಹಿರೇಹರಕುಣಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಬಳಿಕ ಹಿಂದೂ - ಮುಸ್ಲಿಂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದ ಅಪರೂಪದ ಘಟನೆಗೆ ಈ ಘಟನೆ ಸಾಕ್ಷಿಯಾಯ್ತು.
ಮೂಲತಃ ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮದವರಾದ ಮಾಲಿಂಗಶಾವಲಿ ಬಾಬಾ 20 ವರ್ಷಗಳಿಂದ ಮಕನಾದ ಬಾಬಾ ಆಗಿದ್ದು, ಪ್ರತಿ ವರ್ಷ ಹಿರೇಹರಕುಣಿ ಗ್ರಾಮದಲ್ಲಿ ದರ್ಗಾ, ಉರುಸು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಲೋಕೋದ್ದಾರದಂತಹ ಮಹತ್ವದ ಕಾರ್ಯ ಕೈಗೊಂಡಿದ್ದರು.