ಹುಬ್ಬಳ್ಳಿ: ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹದಾಯಿ ಹೋರಾಟಗಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಮನವಿ ಸಲ್ಲಿಸಿದರು.
ಮಹದಾಯಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಕೂಡಲೇ ಬಗೆಹರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಅಲ್ಲದೇ ಮೂರು ರಾಜ್ಯದ ಜೊತೆಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆ ಹಿತವನ್ನು ಕಾಪಾಡಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.
ಈ ವೇಳೆ ಸುಭಾಸಚಂದ್ರ ಗೌಡ ನೇತೃತ್ವದಲ್ಲಿ ಅಮಿತ್ ಶಾಗೆ ಹಸಿರು ಶಾಲು ಹಾಕಿ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು. ಹೋರಾಟಗಾರರ ಬೇಡಿಕೆಗಳಿಗೆ ಅಮಿತ್ ಶಾ ಸ್ಪಂದಿಸುವ ಭರವಸೆ ನೀಡಿದರು.