ETV Bharat / state

ಆಸ್ಪತ್ರೆಯಿಂದ ರೆಮ್​ಡಿಸಿವಿರ್​ ಕದ್ದು ಮಾರಾಟಕ್ಕೆ ಯತ್ನ: ಹುಬ್ಬಳ್ಳಿಯಲ್ಲಿ ಪ್ರೇಮಿಗಳ ಬಂಧನ

author img

By

Published : Jun 3, 2021, 5:08 PM IST

ಪ್ರೇಮಿಗಳಿಬ್ಬರು ಹಣ ಮಾಡಲು ಹೋಗಿ ಆಸ್ಪತ್ರೆಯಲ್ಲಿದ್ದ ರೆಮ್​ಡಿಸಿವಿರ್​ ಇಂಜೆಕ್ಷನ್​ ಕದ್ದು ಮಾರಾಟ ಮಾಡಲು ಮುಂದಾದಾಗ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

arrest-of-lovers-in-hubli-due-to-stolen-of-remidesivir
ರೆಮ್ಡಿಸಿವಿರ್​ ಕದ್ದ ಆರೋಪಿಗಳು

ಹುಬ್ಬಳ್ಳಿ: ಮಾರಕ‌ ಕೊರೊನಾ ನಿತ್ಯ ನೂರಾರು ಜನರ ಪ್ರಾಣವನ್ನ ಬಲಿ ಪಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದುಷ್ಟರು ಮಾತ್ರ ಹಣ ಮಾಡಲು ಹೋಗಿ ನೇರವಾಗಿ ಜೈಲು ಸೇರುತ್ತಿದ್ದಾರೆ. ಇದೇ ರೀತಿ ನಗರದ ಆಸ್ಪತ್ರೆಯಲ್ಲಿ ರೆಮ್ಡಿಸಿವಿರ್​ ಇಂಜೆಕ್ಷನ್​ ಕದ್ದು ಮಾರಾಟ ಮಾಡುತ್ತಿದ್ದ ಪ್ರೇಮಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ನಗರದ ವೆಂಕಟೇಶ್ವರ ಕಾಲೋನಿಯ ಸಿದ್ದನಗೌಡ ಪಾಟೀಲ್ ಹಾಗೂ ವಿನಾಯಕನಗರದ ರಿಯಾ ವಡ್ಡರ್​ ಎಂಬುವವರೇ ಬಂಧಿತ ಆರೋಪಿಗಳು. ಬೇರೆ ಬೇರೆ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಹಣ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.

ನಗರದ ತತ್ವದರ್ಶಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ರಿಯಾ, ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರ್​ ಆಗಿರುವ ತನ್ನ ಪ್ರಿಯಕರ ಸಿದ್ದನಗೌಡನಿಗೆ ರೋಗಿಯ ಬಳಿ ಇದ್ದ ರೆಮ್​ಡಿಸಿವಿರ್​ನ್ನು ಕದ್ದು ತಂದುಕೊಟ್ಟು, ಅದನ್ನು ಬೇರೆಯವರಿಗೆ ಮಾರಲು ಯತ್ನಿಸಿದಾಗ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಅಕ್ರಮವಾಗಿ ರಸಗೊಬ್ಬರ - ಬೀಜ ಮಾರಿದರೆ ಕಾನೂನು ಕ್ರಮ : ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.