ಹುಬ್ಬಳ್ಳಿ: ಲಾಕ್ಡೌನ್ ಉಲ್ಲಂಘಿಸಿ ತಿರುಗಾಡುವವರ ತಪಾಸಣೆ ವೇಳೆ ನಗರದ ಚೆನ್ನಮ್ಮ ವೃತ್ತದಲ್ಲಿ ವಕೀಲರೊಬ್ಬರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ನಗರದ ಹಲವು ಕಡೆ ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಓಡಾಡೋ ವಾಹನಗಳ ತಪಾಸಣೆ ಮಾಡಿ ಪೊಲೀಸರು ಸೀಜ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾರು ತಪಾಸಣೆ ವೇಳೆ ಏಕಾಏಕಿ ಪೊಲೀಸರ ಜೊತೆ ವಕೀಲರೊಬ್ಬರು ವಾಗ್ವಾದಕ್ಕಿಳಿದಿದ್ದಾರೆ.
ಸ್ಥಳಕ್ಕೆ ಆಗಮಿಸಿ ಇನ್ಸ್ಪೆಕ್ಟರ್ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ರಾಜಣ್ಣ ಕೊರವಿ, ಡಿಸಿಪಿ ರಾಮರಾಜನ್ ಜೊತೆ ವಾಗ್ವಾದಕ್ಕಿಳಿದಿದ್ದರು.
ಇಂದು ವಕೀಲರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆದ್ರೆ, ಪೊಲೀಸರು ತಾಳ್ಮೆ ಪ್ರದರ್ಶಿಸುತ್ತಿರುವುದು ನಿಜಕ್ಕೂ ಶಾಘ್ಲನೀಯ.
ಓದಿ: ಡಿಸಿಪಿಗೆ ಆವಾಜ್ ಹಾಕಿದ ಬಿಜೆಪಿ ಮುಖಂಡ: ದಂಡ ಕಟ್ಟಿಸಿ ಬಿಸಿ ಮುಟ್ಟಿಸಿದ ಪೊಲೀಸರು