ETV Bharat / state

ಧಾರವಾಡ ಲಾಕ್​ಡೌನ್​: ಬಿಕೋ‌ ಎನ್ನುತ್ತಿರುವ ರಸ್ತೆಗಳು, ಅಲ್ಲಲ್ಲಿ ಬೀದಿಗಿಳಿದ ಆಟೋಗಳು

ಕೊರೊನಾ ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಆದ್ರೆ ಅಲ್ಲಲ್ಲಿ ಆಟೋಗಳು ರಸ್ತೆಗಿಳಿದಿವೆ.

Lockdown condition in Dharawada
ಧಾರವಾಡ ಲಾಕ್​ಡೌನ್​: ಬಿಕೋ‌ ಎನ್ನುತ್ತಿರುವ ರಸ್ತೆಗಳು...ಅಲ್ಲಲ್ಲಿ ಬೀದಿಗಿಳಿದ ಆಟೋಗಳು
author img

By

Published : Mar 24, 2020, 11:54 AM IST

ಧಾರವಾಡ: ಕೊರೊನಾ ಹರಡುವ ಆತಂಕದಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ.

ಧಾರವಾಡ ಲಾಕ್​ಡೌನ್​: ಬಿಕೋ‌ ಎನ್ನುತ್ತಿರುವ ರಸ್ತೆಗಳು, ಅಲ್ಲಲ್ಲಿ ಬೀದಿಗಿಳಿದ ಆಟೋಗಳು

ಸರ್ಕಾರಿ,‌ ಖಾಸಗಿ ಬಸ್ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದ್ದು, ನಿರ್ಬಂಧದ ನಡುವೆಯೂ ಕೆಲವೆಡೆ ಎಂದಿನಂತೆ ಆಟೋಗಳು ರಸ್ತೆಗಿಳಿದಿವೆ. ಸೋಮವಾರ ಬೆಳಗ್ಗೆಯಿಂದಲೇ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಆದ್ರೆ ಜಿಲ್ಲಾಧಿಕಾರಿ ದೀಪಾ ಚೋಳನ್​, ಜಿ.ಪಂ‌. ಸಿಇಒ ಆರ್.ಸತೀಶ್, ಎಸಿ, ತಹಶೀಲ್ದಾರ್​ ಅವರು ಸಿಟಿ ರೌಂಡ್ಸ್ ಮಾಡಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು.

ಮಹಾಮಾರಿ ಕೊರೊನಾವನ್ನು ನಿಯಂತ್ರಿಸಲು ಇನ್ನೂ ಒಂದು ವಾರ ಕಾಲ ಜನರ ಸ್ಪಂದನೆ ಅಗತ್ಯವಾಗಿದೆ. ಇದಕ್ಕಾಗಿ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.