ಹುಬ್ಬಳ್ಳಿ: ಕೊರೊನಾ ಪ್ರಕರಣಗಳು ದಿನದಿಂದ ಹೆಚ್ಚಾಗುತ್ತಿರುವುದರಿಂದ ಅವಳಿ ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೆ ಲಾಕ್ಡೌನ್ಗೆ ಕ್ಯಾರೆ ಎನ್ನದೆ ಬೇಕಾಬಿಟ್ಟಿ ತಿರುಗುವವರು ಹಾಗೂ ಸಮಯ ಮೀರಿ ಅಂಗಡಿ ಮುಂಗಟ್ಟು ತೆರೆದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಬೆಳಗ್ಗೆ 10.30 ಗಂಟೆಯಾದರೂ ಜನತಾ ಬಜಾರ್ನ ಅಂಗಡಿಗಳನ್ನು ತೆರೆಯಲಾಗಿತ್ತು. ಹೀಗಾಗಿ ಪೊಲೀಸರು ಅಂಗಡಿ ಮಾಲೀಕರಿಗೆ ಲಾಠಿ ರುಚಿ ತೋರಿಸಿ ಅಂಗಡಿ ಮುಚ್ಚಿಸಿದರು. ಇನ್ನು ನಗರದ ಚೆನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೇಕಾಬಿಟ್ಟಿಯಾಗಿ ಸಂಚಾರ ಮಾಡುವ ವಾಹನ ಸವಾರರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಅಲ್ಲದೇ ಅನಗತ್ಯವಾಗಿ ಓಡಾತ್ತಿದ್ದ ವಾಹನಗಳನ್ನು ಕೂಡ ಸೀಜ್ ಮಾಡಿದ್ದಾರೆ.