ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ ವಾಹನಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಂಟೈನರ್ ಉರುಳಿಬಿದ್ದು ಅದರಲ್ಲಿದ್ದ ಮೊಟ್ಟೆಗಳು ಒಡೆದು ರಸ್ತೆಯ ತುಂಬೆಲ್ಲಾ ಬಿದ್ದ ಘಟನೆ ಹುಬ್ಬಳ್ಳಿ-ಗದಗ ರಸ್ತೆಯ ಐಟಿಸಿ ಗೋಡೌನ್ ಎದುರು ನಡೆದಿದೆ.
ಗದಗದಿಂದ ಕುಮಟಾಗೆ ಮೊಟ್ಟೆಯನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನ ಹುಬ್ಬಳ್ಳಿ ಹೊರವಲಯದ ಐಟಿಸಿ ಗೌಡನ ಹತ್ತಿರ ರಸ್ತೆ ಬಂದಿ ನಿಂತಾಗ, ಅದಿರು ತುಂಬಿಕೊಂಡು ಬಂದ ಲಾರಿ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಟೈನರ್ ವಾಹನ ಉರುಳಿ ಬಿದ್ದ ಪರಿಣಾಮ ಗಾಡಿಯಲ್ಲಿದ್ದ ಮೊಟ್ಟೆಗಳು ರಸ್ತೆ ಪಾಲಾಗಿವೆ.
ಘಟನೆಯಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಕಂಟೈನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.