ಹುಬ್ಬಳ್ಳಿ: ಪ್ರಯಾಣಿಕನ ಮೇಲೆ ರೈಲ್ವೆ ಇಲಾಖೆಯ ಮಹಿಳಾ ಪೊಲೀಸ್ ಪೇದೆವೋರ್ವರು ದರ್ಪ ತೋರಿದ್ದಾರೆ ಎಂಬ ಆರೋಪ ಪ್ರಕರಣ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ನಡೆದಿದೆ.
ಆರ್ಪಿಎಫ್ ಮಹಿಳಾ ಪೇದೆ ವಿಜಯಲಕ್ಷ್ಮಿ ಎಂಬುವರು ಪ್ರಯಾಣಿಕನ ಮೇಲೆ ದರ್ಪ ತೋರಿದ್ದಾರೆ. ಶನಿವಾರ ಸಮಜೆ ಹುಬ್ಬಳ್ಳಿ-ಚೆನ್ನೈ ರೈಲು ಚಾಲನೆಗೆ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಮೇಲೆ ರೈಲು ನಿಲ್ದಾಣದ ಮುಖ್ಯ ಗೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ ಅವರು ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗ್ತಿದೆ.
ಪ್ರಯಾಣಿಕನ ಮೈಮೇಲಿನ ಶರ್ಟ್ ಹಿಡಿದು ಎಳೆದಾಡಿದ್ದಲ್ಲದೆ, ಹಲ್ಲೆ ಸಹ ಮಾಡಲು ಯತ್ನಿಸಿದ್ದಾರೆ. ಇಷ್ಟೇ ಅಲ್ಲದೆ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಯಾಣಿಕ ವಿರೋಧ ವ್ಯಕ್ತಪಡಿಸಿದಾಗ ಕೆಲ ಸಿಬ್ಬಂದಿ ಜಗಳ ಬಿಡಿಸಲು ಯತ್ನಿಸಿದ್ದಾರೆ. ಅಷ್ಟಕ್ಕೂ ಜಗ್ಗದ ಮಹಿಳಾ ಪೇದೆ ಸುಮ್ಮನಾಗಲಿಲ್ಲ. ಇದನ್ನು ನೋಡಿಯೂ ನೋಡದಂತೆ ಹಿರಿಯ ಅಧಿಕಾರಿಗಳು ಇದ್ದರು ಎಂಬ ಆರೋಪವೂ ಕೇಳಿಬಂದಿದೆ.
![Lady constable misbehavior, Lady constable misbehavior on government employee, Hubli Railway station news, hubli news,](https://etvbharatimages.akamaized.net/etvbharat/prod-images/4446627_rail.jpg)
ಈ ಘಟನೆಯನ್ನು ಸೆರೆಹಿಡಿದಿರುವ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.