ETV Bharat / state

ಕಲ್ಲು ಒಡೆಯುವ ಕುಟುಂಬಗಳ ಮೇಲೆ 'ಚಪ್ಪಡಿ ಕಲ್ಲು' ಎಳೆದ ಕೊರೊನಾ..

author img

By

Published : May 12, 2020, 3:29 PM IST

ಅಕ್ಕಿ, ಬೇಳೆ ಸರ್ಕಾರದಿಂದ ಸಿಕ್ಕಿದೆ. ಅದನ್ನು ಹೊರತುಪಡಿಸಿದ್ರೆ, ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿವೆ ಕಲ್ಲು ಒಡೆಯುವವರ ಕುಟುಂಬಗಳು..

stone-breakers
ಸಂಕಷ್ಟದಲ್ಲಿ ಕಲ್ಲು ಒಡೆಯುವ ಕುಟುಂಬಗಳು

ಹುಬ್ಬಳ್ಳಿ : ಲಾಕ್​ಡೌನ್​ನಿಂದಾಗಿ ವಾಣಿಜ್ಯ ನಗರಿಯ ಹೊಸೂರು ಕ್ರಾಸ್ ಬಳಿ ಇರುವ ಕಲ್ಲು ಒಡೆಯುವ ಜನರು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ.

ನಿತ್ಯವೂ ಹಳ್ಳಿಗಳಿಗೆ ತೆರಳಿ ಒಳಕಲ್ಲು, ಕಾಳು ಬೀಸುವ ಕಲ್ಲು, ರುಬ್ಬುವ ಕಲ್ಲನ್ನು ತಯಾರಿಸಿ ಅದರಿಂದ ಬಂದ ಆದಾಯದಲ್ಲೇ ಜೀವನ ನಡೆಸುತ್ತಿದ್ದರು. ಆದರೀಗ ಲಾಕ್​ಡೌನ್‌ನಿಂದಾಗಿ ಆಗಿದ್ದು ಎಲ್ಲಿಯೂ ತೆರಳದೆ ಮನೆಯ ಮುಂದೆಯೇ ಕಲ್ಲಿನ ವಸ್ತುಗಳನ್ನ ತಯಾರಿಸುತ್ತಿದ್ದಾರೆ. ಅಕ್ಕಿ, ಬೇಳೆ ಸರ್ಕಾರದಿಂದ ಸಿಕ್ಕಿದೆ. ಅದನ್ನು ಹೊರತುಪಡಿಸಿದ್ರೆ, ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಂಕಷ್ಟದಲ್ಲಿವೆ ಕಲ್ಲು ಒಡೆಯುವವರ ಕುಟುಂಬಗಳು..

ಸರ್ಕಾರ ಈಗಾಗಲೇ ಮತ್ತೊಂದು ಹಂತದ ವಿಶೇಷ ಪ್ಯಾಕೇಜ್‌ ಘೋಷಿಸಲು ಹೊರಟಿದೆ. ಇಂಥ ಬಡ ಕಾರ್ಮಿಕರನ್ನ ಗಮನದಲ್ಲಿಟ್ಟುಕೊಂಡು ಪರಿಹಾರ ಘೋಷಣೆ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.