ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನೆಮಾ ಕೋಟಿಗೊಬ್ಬ -3 ಇಂದು ರದ್ದಾಗಿರುವುದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಕೊರೊನಾ ಮಹಾಮಾರಿಗೆ ಎಲ್ಲ ಚಿತ್ರ ಮಂದಿರಗಳು ಬಂದ್ ಆಗಿದ್ದವು. ಸಿನಿ ಪ್ರೇಕ್ಷಕರು ಸಹ ಮನರಂಜನೆ ಇಲ್ಲದೇ ಕಂಗಲಾಗಿದ್ದರು. ಇಂದು ಆಯುಧ ಪೂಜೆ ಹಬ್ಬಕ್ಕೆ ಅಭಿಮಾನಿಗಳಿಗೆ ಡಬಲ್ ಧಮಾಕಾ ಕೊಟ್ಟಿದ್ದ ಕೋಟಿಗೊಬ್ಬ -3 ಚಿತ್ರ ತಾಂತ್ರಿಕ ದೋಷದಿಂದ ಬಂದ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಮನೆಯತ್ತ ಮುಖ ಮಾಡಿದ್ದಾರೆ.
ಹುಬ್ಬಳ್ಳಿಯ ಸುಜಾತಾ ಚಿತ್ರಮಂದಿರದಲ್ಲಿ ಪ್ರದರ್ಶನವಾಗಬೇಕಿದ್ದ ಚಿತ್ರ ರದ್ದಾಗಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಚಿತ್ರಮಂದಿರದ ಸಿಬ್ಬಂದಿ ಪೇಕ್ಷಕರ ಮನವೊಲಿಸಿ ಟಿಕೆಟ್ ಪಡೆದವರಿಗೆ ನಾಳೆ ಶೋ ನೋಡಲು ಅನುಮತಿ ನೀಡಿ, ಹಣ ಮರಳಿ ನೀಡಿ ಕಳುಹಿಸಿದರು.
ಧಾರವಾಡದ ಪದ್ಮಾ ಹಾಗೂ ವಿಜಯ ಚಿತ್ರಮಂದಿರದಲ್ಲಿಯೂ ಕೋಟಿಗೊಬ್ಬ -3 ಚಿತ್ರ ರದ್ದಾಗಿದ್ದರಿಂದ ಪ್ರೇಕ್ಷಕರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತುಕೊಂಡು ಟಿಕೆಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳು, ಪಟಾಕಿ ಸಿಡಿಸಿ ಸಂಭ್ರಮ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಕಿಚ್ಚನಿಗೆ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.
ಓದಿ: ನವರಾತ್ರಿ ಬಂತೆಂದರೆ ಇವರು ಪ್ರೇತ.. ಹರಕೆ ತೀರಿಸಲು ಪುತ್ತೂರು ಆಟೋ ಚಾಲಕನ ವಿಚಿತ್ರ ವೇಷ