ETV Bharat / state

ಮೊದಲು ಕೊಟ್ಟ ಖಾತೆ ಮಹತ್ವ ತಿಳಿದುಕೊಳ್ಳಿ : ನಟ ಸುರೇಶ್ ಹೆಬ್ಳೀಕರ್ ಸಲಹೆ - ಖಾತೆ ಬದಲಾವಣೆ

ನಮ್ಮ ದೇಶದ ಪರಿಸರ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕಿದೆ. ಆಯುರ್ವೇದ ಪದ್ಧತಿಗೆ ನಾವು ಒತ್ತು ಕೊಡುತ್ತಿಲ್ಲ. ಪ್ರತಿಯೊಂದಕ್ಕೂ ಅಲೋಪತಿಗೆ ಹೋಗುತ್ತಿದ್ದೇವೆ. ನಮ್ಮ ಮನೆ ಔಷಧಿಗಳಿಂದಲೇ ಇಮ್ಯುನಿಟಿ ಬರುತ್ತಿತ್ತು. ಅದನ್ನೆಲ್ಲ ಬಿಟ್ಟು ಇಮ್ಯುನಿಟಿ ಕಳೆದುಕೊಂಡಿದ್ದೇವೆ..

Know the importance of the ministrial post
ನಟ ಹೆಬ್ಳೀಕರ
author img

By

Published : Aug 14, 2021, 10:01 PM IST

ಧಾರವಾಡ : ಪ್ರತಿ ಖಾತೆಯೂ ತನ್ನದೆಯಾದ ಮಹತ್ವ ಹೊಂದಿದೆ. ಮೊದಲು ಸಚಿವರ ಖಾತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಖಾತೆ ಕ್ಯಾತೆ ತೆಗೆದಿರುವ ಸಚಿವರಿಗೆ ಹಿರಿಯ ನಟ ಹಾಗೂ ಪರಿಸರವಾದಿ ಸುರೇಶ್​​ ಹೆಬ್ಳೀಕರ್​ ಕಿವಿಮಾತು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಮೊದಲು ತಮಗೆ ಸಿಕ್ಕ ಖಾತೆಯ ಬಗ್ಗೆ ಅರಿತುಕೊಳ್ಳಬೇಕು. ಅದು ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದರು.

ಸಚಿವರಿಗೆ ನಟ ಸುರೇಶ್ ಹೆಬ್ಳೀಕರ್ ಸಲಹೆ ಹೀಗಿದೆ..

ದೇಶದಲ್ಲಿ ಶೇ.70ರಷ್ಟು ಜನ 35 ವರ್ಷದೊಳಗಿನವರಿದ್ದಾರೆ ಎಂದು ಸಮೀಕ್ಷೆಯೊಂದರ ವರದಿ ಹೇಳಿದೆ. ಅವರೆಲ್ಲರಿಗೂ ಒಳ್ಳೆ ಭವಿಷ್ಯದ ಯೋಚನೆ ಇದೆ. ಅಂಥವರಿಗೆ ಇಂದು ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ದೇಶದ ಪರಿಸರ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕಿದೆ. ಆಯುರ್ವೇದ ಪದ್ಧತಿಗೆ ನಾವು ಒತ್ತು ಕೊಡುತ್ತಿಲ್ಲ. ಪ್ರತಿಯೊಂದಕ್ಕೂ ಅಲೋಪತಿಗೆ ಹೋಗುತ್ತಿದ್ದೇವೆ. ನಮ್ಮ ಮನೆ ಔಷಧಿಗಳಿಂದಲೇ ಇಮ್ಯುನಿಟಿ ಬರುತ್ತಿತ್ತು. ಅದನ್ನೆಲ್ಲ ಬಿಟ್ಟು ಇಮ್ಯುನಿಟಿ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.