ETV Bharat / state

ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ಬಳಸಿ ಸೋಂಕಿತರಿಗೆ ಸಂಜೀವಿನಿಯಾದ ಹುಬ್ಬಳ್ಳಿ ಕಿಮ್ಸ್‌

ಉತ್ತರ ಕರ್ನಾಟಕದ 8 ಜಿಲ್ಲೆಯ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಆದರೆ, ಕೊರೊನಾ ವಿಷಯದಲ್ಲಿ ಕರ್ನಾಟಕಕ್ಕೆ ಸಂಜೀವಿನಿ ಆಗಿದೆ. ದಕ್ಷಿಣ ಕರ್ನಾಟಕದ ಜನ ಬಂದು ಕೊರೊನಾಗೆ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಈಗಾಗಲೇ 600 ಬೆಡ್‌ ವ್ಯವಸ್ಥೆ ಮಾಡಲಾಗಿದೆ..

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
Hubli kims hospital
author img

By

Published : Sep 5, 2020, 7:21 PM IST

ಹುಬ್ಬಳ್ಳಿ: ಕೊರೊನಾ ಮಹಾಮಾರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದಾಗ ಕಿಮ್ಸ್ ಕೊರೊನಾ ವಿರುದ್ಧ ಸೆಡ್ಡು ಹೊಡೆದು ಹೋರಾಟ ನಡೆಸಿದೆ. ಅದರಲ್ಲೂ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ಮರಳಿ ಮನೆಗೆ ಬರುವುದಿಲ್ಲ ಎಂಬ ಮಾತನ್ನು ಕೊರೊನಾ ಚಿಕಿತ್ಸೆ ವಿಷಯದಲ್ಲಿ ಸುಳ್ಳಾಗಿಸಿದೆ. ಸರ್ಕಾರದ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು ಉತ್ತಮ ಚಿಕಿತ್ಸೆ ನೀಡುವ ಮೂಲಕ ಕಿಮ್ಸ್ ಉತ್ತರ ಕರ್ನಾಟಕದ ಜನರ ಪಾಲಿಗೆ ಸಂಜೀವಿನಿಯಾಗಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಕಿಮ್ಸ್ ಸೈ ಎನಿಸಿಕೊಂಡಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆದರೂ ಗುಣವಾಗುತ್ತಿಲ್ಲ. ಬದಲಿಗೆ ಕಿಮ್ಸ್‌ಗೆ ದಾಖಲಾದವರು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. ಬಹಳಷ್ಟು ರೋಗಿಗಳು ಕಿಮ್ಸ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸೋಂಕಿತರ ಪಾಲಿನ ಸಂಜೀವಿನಿ..

ಉತ್ತರ ಕರ್ನಾಟಕದ 8 ಜಿಲ್ಲೆಯ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಆದರೆ, ಕೊರೊನಾ ವಿಷಯದಲ್ಲಿ ಕರ್ನಾಟಕಕ್ಕೆ ಸಂಜೀವಿನಿ ಆಗಿದೆ. ದಕ್ಷಿಣ ಕರ್ನಾಟಕದ ಜನ ಬಂದು ಕೊರೊನಾಗೆ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಈಗಾಗಲೇ 600 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ 450 ಬೆಡ್​ ತುಂಬಿವೆ. ಇವುಗಳಲ್ಲಿ 350 ಕೋವಿಡ್ ರೋಗಿಗಳು, 125 Sariಗೆ ಸಂಬಂಧಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 200 ಐಸಿಯು ಬೆಡ್ ಇವೆ. ಇವೆಲ್ಲದರ ನಡುವೇ ಇನ್ನೂ 400 ಬೆಡ್ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.

ಈಗಾಗಲೇ 30 ಜನರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿ ಕಿಮ್ಸ್ ಹೆಸರು ಮಾಡಿದೆ. 16 ಜನರು ಪ್ಲಾಸ್ಮಾ ನೀಡಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಪಡೆದಿದ್ದಾರೆ. ಆದರೆ, ಸರ್ಕಾರ ಹಾಗೂ ಜಿಲ್ಲಾಡಳಿತ ಅನುದಾನವನ್ನು ಬಳಸಿಕೊಂಡು ಸಮರ್ಥವಾಗಿ ‌ಕೊರೊನಾ ರೋಗಕ್ಕೆ ಚಿಕಿತ್ಸೆ ನೀಡುವುದರಲ್ಲಿ‌ ಬೆಂಗಳೂರು ಹೊರತುಪಡಿಸಿದ್ರೆ ಕಿಮ್ಸ್ ಎರಡನೇ ಸ್ಥಾನದಲ್ಲಿದೆ. ಸಾರಿ ಹಾಗೂ ಇತರೆ ರೋಗಕ್ಕೆ ಸಂಬಂಧಿಸಿದಂತೆ ಏಳೆಂಟು ಜಿಲ್ಲೆಗಳ ರೋಗಿಗಳು ದಾಖಲಾಗಿ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಎಲ್ಲರಿಗೂ ಊಟ, ವಸತಿ, ಉಪಹಾರ, ಚಹಾ ಎಲ್ಲವೂ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ. ಬಾತ್ ರೂಂ, ಶೌಚಾಲಯ ನೈರ್ಮಲ್ಯದಿಂದ ಕೂಡಿವೆ. ಮನೆಯ ವಾತಾವರಣವೇ ನಿರ್ಮಾಣವಾಗಿದೆ. ವೈದ್ಯಕೀಯ ಸಿಬ್ಬಂದಿಯ ಸೇವೆ ಅನನ್ಯವಾಗಿದೆ ಎಂದು ರೋಗಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವರೇ ಹೆಚ್ಚು. ಅದರಲ್ಲೂ ಕಿಮ್ಸ್ ಅಂದ್ರೆ ಅವ್ಯವಸ್ಥೆ ತಾಣ ಎನ್ನುತ್ತಿದ್ದಾಗ ಕೊರೊನಾ ವಿಚಾರದಲ್ಲಿ ಕಿಮ್ಸ್ ಸಿಬ್ಬಂದಿ ಉತ್ತಮ ಸೇವೆ ನೀಡುವ ಮೂಲಕ ತನ್ನ ಸಾಧನೆಯನ್ನು ರಾಜ್ಯಾದ್ಯಂತ ಪಸರಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.