ಹುಬ್ಬಳ್ಳಿ: ಜನವರಿ 31ಕ್ಕೆ ಕನ್ನಡದ ಸಸ್ಪೆನ್ಸ್ ಚಿತ್ರ 'ಕಾಣದದಂತೆ ಮಾಯವಾದನು' ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು 'ಜಯಮ್ಮನ ಮಗ' ಚಿತ್ರದ ಖ್ಯಾತಿಯ ನಿರ್ದೇಶಕ ಹಾಗೂ ನಟ ವಿಕಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವು ಹಾರರ್ ಮತ್ತು ಕಾಮಿಡಿಯನ್ನೊಳಗೊಂಡಿದೆ. ಚಿತ್ರದಲ್ಲಿ ಪ್ರೀತಿ ಮಾಡಿದ ಹುಡುಗನನ್ನು ಕೊಲೆ ಮಾಡಲಾಗುತ್ತೆ. ಅವನ ಆತ್ಮವು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಚಿತ್ರದ ಕಾನ್ಸೆಪ್ಟ್. ಚಿತ್ರವು ಪ್ರೀತಿ-ತ್ಯಾಗ,ದ್ವೇಷ, ಅಸೂಯೆ ಇವೆಲ್ಲಾ ಅಂಶಗಳನ್ನೊಳಗೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ ಎಂದರು.
ಹೆಸರಾಂತ ಖಳನಟ ಉದಯ್ ಅವರ ಕೊನೆಯ ಚಿತ್ರವಿದು. ಸಿನಿಮಾ ಇದೇ ತಿಂಗಳು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಸಿಂಧು ಲೋಕನಾಥ್, ಸಹ ನಿರ್ದೇಶಕ ಅರುಣ್ ಇದ್ದರು.