ಕಲಘಟಗಿ: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಭಾನುವಾರದ ಲಾಕ್ ಡೌನ್ಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಅಗತ್ಯ ಸೇವೆಗಳನ್ನು ಹೊರತಪಡಿಸಿ, ಪಟ್ಟಣದ ಮುಖ್ಯಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.
ಇನ್ನು ಪಟ್ಟಣದ ರಸ್ತೆಗಳು ಸ್ಥಬ್ದವಾಗಿದ್ದವು, ಬೆರಳೆಣಿಕೆಯ ವಾಹನಗಳು ಮಾತ್ರ ಸಂಚರಿಸುತ್ತಿದ್ದವು.