ಕಲಘಟಗಿ : ತಾಲೂಕಿನ ತಬಕದಹೊನ್ನಳ್ಳಿಯಲ್ಲಿ ರೈತರು ಬೆಳೆದ ಬೆಳೆಗೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಗ್ರಾಮದ ಮಾದೇವಪ್ಪ ಮಣ್ಣಪ್ಪ ತಡಸ ಎಂಬ ರೈತ ಸುಮಾರು 4 ಎಕರೆ ಮೆಕ್ಕೆಜೋಳವನ್ನು ಬೆಳೆದಿದ್ದರು. ಕಾಡುಹಂದಿಗಳ ಹಾವಳಿಯಿಂದ ಗೋವಿನಜೋಳ ನೆಲಸಮವಾಗಿದ್ದು, ಕಾಡುಹಂದಿಗಳು ಬೆಳೆ ತಿಂದು ಹಾಕಿದ್ದರ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅಪಾರ ಹಾನಿಯಾಗಿದೆ.
ಬೆಳೆ ಹಾನಿಯಿಂದಾಗಿ ಸಾಕಷ್ಟು ನಷ್ಟವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ನಷ್ಟ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾನೆ.