ETV Bharat / state

'ಕೈ' ಹಿಡಿದ ಶೆಟ್ಟರ್; ಲಿಂಗಾಯತ ಮತದಾರರನ್ನು ಕಟ್ಟಿ ಹಾಕಲು ಕಮಲ ಕಲಿಗಳ ರಣತಂತ್ರ, ನಾಳೆ ಹುಬ್ಬಳ್ಳಿಗೆ ನಡ್ಡಾ..

ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರ್ಪಡೆ ಬೆನ್ನಲ್ಲೇ ಲಿಂಗಾಯುತ ಸಮುದಾಯದ ಮತ ಸೆಳೆಯಲು ಬಿಜೆಪಿ ಮಾಸ್ಟರ್​ ಪ್ಲಾನ್​ ರೂಪಿಸುತ್ತಿದೆ.

bjp,cng
ಜೆ.ಪಿ.ನಡ್ಡಾ,ಜಗದೀಶ್​ ಶೆಟ್ಟರ್
author img

By

Published : Apr 17, 2023, 12:25 PM IST

Updated : Apr 17, 2023, 12:30 PM IST

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್​ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ಪಾಳಯ ಮೈಕೊಡವಿ ನಿಂತಿದೆ. ಶೆಟ್ಟರ್‌ ಕಾಂಗ್ರೆಸ್ ಸೇರ್ಪಡೆಯಿಂದ ಆತಂಕಕ್ಕೆ ಒಳಗಾದ ಬಿಜೆಪಿ ನಾಯಕರು ಲಿಂಗಾಯತ ಸಮುದಾಯ ಬಿಜೆಪಿಯ ಮೇಲೆ ಮುನಿಸಿಕೊಳ್ಳದಂತೆ ನೋಡಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.

ದೊಡ್ಡ ಸಂಖ್ಯೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಜಗದೀಶ್ ಶೆಟ್ಟರ್ ಅವರ ಬೆಂಬಲಿಗರನ್ನು ಕಟ್ಟಿ ಹಾಕಲು ಯತ್ನಿಸಲಾಗುತ್ತಿದೆ. ಇದಕ್ಕಾಗಿ ಹುಬ್ಬಳ್ಳಿ - ಧಾರವಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎಂಟ್ರಿ ಕೊಡುತ್ತಿದ್ದಾರೆ‌. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಬಹು ದೊಡ್ಡ ಹೊಡೆತ ಬೀಳಲಿದೆ. ಉತ್ತರ ಕರ್ನಾಟಕದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಿಂಗಾಯತ ನಾಯಕರು ಜಗದೀಶ್ ಶೆಟ್ಟರ್ ಅಭಿಮಾನಿಗಳು ಪಕ್ಷ ತೊರೆಯುವ ಭೀತಿ ಕಾಡುತ್ತಿದೆ‌. ಇದಕ್ಕೆ ಮುಲಾಮು ಹಚ್ಚಲು ಕಮಲ ಕಲಿಗಳು ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆತರಲು ಮುಂದಾಗಿದ್ದಾರೆ. ನಾಳೆ ಸಂಜೆ ಜೆ.ಪಿ. ನಡ್ಡಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ‌.

ಎರಡೂ ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಠಿಕಾಣಿ ಹೂಡಲಿರುವ ಅವರು, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್ ಸ್ಪರ್ಧೆ ಮಾಡುವ ಸೆಂಟ್ರಲ್ ಕ್ಷೇತ್ರದಲ್ಲಿಯೇ ನಡ್ಡಾ ಆರ್ಭಟ ಮಾಡಲಿದ್ದಾರೆ. ಶೆಟ್ಟರ್​​​ ಜೊತೆ ಯಾರೂ ಕೈ ಜೋಡಿಸಬಾರದೆಂದು ಎಚ್ಚರಿಕೆ ಕೊಡಲು ಪಕ್ಷದ ಪದಾಧಿಕಾರಿಗಳು ಸಭೆಯನ್ನು ಕರೆಯುವುದರ ಜೊತೆಗೆ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ನಾಡಿದ್ದು ಮೂರು ಸಾವಿರ ಮಠ, ಸಿದ್ದಾರೂಢರ ಮಠಕ್ಕೆ ಭೇಟಿ ನೀಡಲಿದ್ದು, ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಲಿದ್ದಾರೆ‌.

ಜಗದೀಶ್ ಶೆಟ್ಟರ್ ಬಿ ಫಾರಂ ತಗೆದುಕೊಂಡು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಶೆಟ್ಟರ್ ವಿರುದ್ಧವಾಗಿ ಈಗ ಲಿಂಗಾಯತ ಸಮಯದಾಯದ ಇಬ್ಬರು ನಾಯಕರು ಸ್ಪರ್ಧೆಗೆ ಇಳಿಯಲು ಸನ್ನದ್ಧವಾಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಶೆಟ್ಟರ್ ವಿರುದ್ಧ ಪರಾಭವಗೊಂಡಿದ್ದ ಡಾ. ಮಹೇಶ ನಾಲ್ವಾಡ ಹೆಸರು ಹರಿದಾಡುತ್ತಿದೆ. ಆದರೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ.

ಇನ್ನು ಬಿಜೆಪಿ ತೊರೆದು ಬಂದ ಜಗದೀಶ್ ಶೆಟ್ಟರ್ ಅವರ ಹಾದಿ ಸುಗಮವಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ವರಿಷ್ಠರ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಜತ್ ಉಳ್ಳಾಗಡ್ಡಿಮಠ ಹಾಗೂ ಅನಿಲ್ ಕುಮಾರ ಪಾಟೀಲ್ ಅವರು ಸ್ವಾಗತಿಸಿದ್ದು, 30 ವರ್ಷಗಳ ನಂತರ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಸಾಕು ಎನ್ನುತ್ತಿದ್ದಾರೆ.

ಆದರೆ, ಬಿಜೆಪಿಗೆ ಇದು ಬಿಸಿತುಪ್ಪವಾಗಿದ್ದು, ಯಾರು ಬಿಜೆಪಿ ಅಭ್ಯರ್ಥಿಯಾಗುತ್ತಾರೋ ಅವರ ಮೇಲೆ ಚುನಾವಣಾ ಅಖಾಡ ರಂಗೇರಲಿದೆ. ಅದರಲ್ಲೂ ಜೋಶಿ ಹಾಗೂ ಶೆಟ್ಟರ್ ಕಳೆದ 40 ವರ್ಷ ಒಟ್ಟಿಗೆ ರಾಜಕೀಯ ಮಾಡಿದವರು ಈಗ ಜಿದ್ದಾಜಿದ್ದಿಯಾಗಿ ಕಣಕ್ಕೆ ಇಳಿದು ಚುನಾವಣೆ ನಡೆಸುವ ಪರಿಸ್ಥಿತಿಗೆ ಬಂದಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

Last Updated : Apr 17, 2023, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.