ETV Bharat / state

ಎಲ್ಲಾ ಆಪ್ಶನ್​ ಓಪನ್​ ಇದಾವೆ.. ಕಾಂಗ್ರೆಸ್​ ಸೇರ್ತಿರಾ ಅಂತಾ ಕೇಳಿದ್ದಕ್ಕೆ ಶೆಟ್ಟರ್​ ಪ್ರತಿಕ್ರಿಯೆ - ಹುಬ್ಬಳ್ಳಿ

ಬಿಜೆಪಿ ಪಕ್ಷ ಟಿಕೆಟ್​ ನೀಡುವ ಭರವಸೆ ನೀಡದೇ ಇರುವುದರಿಂದ ಜಗದೀಶ್​ ಶೆಟ್ಟರ್​ ಇಂದು ತಮ್ಮ ಶಾಸಕ ಸ್ಥಾನ ಮತ್ತು ಬಿಜೆಪಿ ಪಕ್ಷಕ್ಕೆ ಕಾಗೇರಿ ಬಳಿ ರಾಜೀನಾಮೆ ನೀಡಲಿದ್ದಾರೆ ಮತ್ತೊಂದೆಡೆ ಸಿಎಂ ನಿವಾಸದಲ್ಲಿ ಬಿಜೆಪಿ ನಾಯಕರು ರಹಸ್ಯ ಸಭೆ ನಡೆಸುತ್ತಿದ್ದಾರೆ. ಇದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

jagadish shettar
ಜಗದೀಶ್​ ಶೆಟ್ಟರ್​
author img

By

Published : Apr 16, 2023, 10:08 AM IST

Updated : Apr 16, 2023, 11:50 AM IST

ರಾಜೀನಾಮೆ ಕುರಿತು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸುತ್ತಿರುವ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ನಾನೀಗ ಶಿರಸಿಗೆ ತೆರಳುತ್ತಿದ್ದೇನೆ, ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ನಾನು ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಜೊತೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಶೆಟ್ಟರ್ ಅವರು ಶಿರಸಿಯಿಂದ ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ನನ್ನ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ಕ್ಷಣದಲ್ಲಿ ವಿಸ್ಮಯ ನಡೆಯೋಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೇನೆ, ಹಿಂದೆ ಸರಿಯಲ್ಲ ಎಂದು ತಮ್ಮ ಗಟ್ಟಿ ನಿರ್ಧಾರವನ್ನು ತಿಳಿಸಿದರು.

ಮೋದಿಗಾಗಲಿ, ಶಾ ಗಾಗಲಿ ಗ್ರೌಂಡ್ ಲೆವೆಲ್​ನಲ್ಲಿ ನಡಿತಿರೋದು ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ - ಶೆಟ್ಟರ್​: ಹಾಗೆ, ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಅವಕಾಶಗಳು ತೆರೆದಿವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಜಗದೀಶ್​ ಶೆಟ್ಟರ್ ಹೇಳಿದ್ದಾರೆ. ಇದೇ ವೇಳೆ​ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅವರಿಗೆ ಗ್ರೌಂಡ್ ಲೆವೆಲ್​ ಅಲ್ಲಿ ಏನು ನಡೀತಿದೆ ಅನ್ನೋದು ತಿಳಿಯುತ್ತಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ಗುಡ್​​ ಬೈ.. ಚುನಾವಣೆಗೆ ನಿಂತೇ ನಿಲ್ತೇನಿ - ಹೈಕಮಾಂಡ್​ಗೆ ಶೆಟ್ಟರ್​ ಸವಾಲು

ಇನ್ನು, ಕಾಂಗ್ರೆಸ್‌ನ ಮುಖಂಡರು ಯಾರೂ ಸಂಪರ್ಕಿಸಿಲ್ಲ, ಆದರೆ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ. ಕೆಲವರ ಹಿತಕ್ಕಾಗಿ ಬಿಜೆಪಿಯನ್ನು ಬಲಿ‌ಕೊಡುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡದೆ ಇರುವುದು ಬಿಜೆಪಿಗೆ ಮುಳುವಾಗುತ್ತದೆ. ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ. ಟೇಕನ್ ಇಟ್ ಗ್ರ್ಯಾಂಟೆಡ್ ಅನ್ನೋ ಹಾಗೆ ಮಾತಾಡಿದ್ದಾರೆ ಎಂದು ಆರೋಪಿಸಿದರು.

ಶೆಟ್ಟರ್ ಭೇಟಿಯಾದ ಟಿಕೆಟ್ ವಂಚಿತರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಟೆಕೆಟ್ ವಂಚಿತರಾದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಹಾಗೂ ತವನಪ್ಪ ಅಷ್ಟಗಿ ಭೇಟಿ ನೀಡಿ ಮಾತುಕತೆ ನಡೆಸಿದರು. ಚಿಕ್ಕನಗೌಡರ ಕುಂದಗೋಳದಿಂದ, ಅಷ್ಟಗಿ ಧಾರವಾಡ ಗ್ರಾಮೀಣದಿಂದ ಟಿಕೆಟ್ ಕೇಳಿದ್ದರು. ಆದ್ರೆ ಇವರಿಬ್ಬರ ಬದಲು ಬೇರೆಯವರಿಗೆ ಟಿಕೆಟ್ ಹಂಚಿಕೆಯಾಗಿದ್ದರಿಂದ ಅತೃಪ್ತರಾಗಿದ್ದಾರೆ.

ಬೊಮ್ಮಾಯಿ ನಿವಾಸದಲ್ಲಿ ರಹಸ್ಯ ಸಭೆ.. ಜಗದೀಶ್​ ಶೆಟ್ಟರ್​ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿಯ ನಿವಾಸದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಚಿವ ಗೋವಿಂದ್ ಕಾರಜೋಳ, ಮಾಜಿ ಸಚಿವ ರಮೇಶ್​ ಜಾರಕಿಹೊಳಿಅವರು ರಹಸ್ಯ ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ಹೈಕಮಾಂಡ್​ನಿಂದ ಆಫರ್​ಗಳ ಸುರಿಮಳೆ : ಕೇಂದ್ರ ಸಚಿವ ಸ್ಥಾನ, ಗವರ್ನರ್ ಹುದ್ದೆ ಬೇಡವೆಂದ ಜಗದೀಶ್ ಶೆಟ್ಟರ್

Last Updated : Apr 16, 2023, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.