ಧಾರವಾಡ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಡೆದ ಮನೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಧಾರವಾಡದ ವಕೀಲರ ಸಂಘದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್ಗೆ ಜೆಡಿಎಸ್ ಬೆಂಬಲ ಹಿನ್ನೆಲೆ, ಬಿ ಫಾರ್ಮ್ ಒಬ್ಬರಿಗೆ ನೀಡಿ ಮತ್ತೊಬ್ಬರಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಏನಿದೆ ಅಂತಾ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ಪದವಿ ಕಾಲೇಜುಗಳ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಈವರೆಗೆ ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಅಧಿಕೃತ ನಿರ್ಧಾರವಾಗಿಲ್ಲ. ಯಾವಾಗ ಶುರುವಾಗಬೇಕು ಅಂತಾ ಸಮಯ ನೋಡಿ ನಿರ್ಧಾರ ಮಾಡಬೇಕು. ಕ್ಯಾಬಿನೆಟ್ನಲ್ಲಿ ಚರ್ಚೆ ಆಗಿದೆಯೇ ಹೊರತು ಅಂತಿಮ ನಿರ್ಧಾರವಾಗಿಲ್ಲ. ಆಲೋಚನೆ ಇದೆ ಹೊರತು ಈವರೆಗೆ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಒಂದು ವರ್ಷ ಶಾಲಾ ಕಾಲೇಜು ತೆರೆಯದಂತೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಒಂದು ವರ್ಷ ಲಿಮಿಟ್ ಏಕೆ? ಒಂದು ತಿಂಗಳು ಅಥವಾ ಎರಡು ತಿಂಗಳು ಬಿಟ್ಟು ನೋಡೋಣ ಎಂದು ಉತ್ತರಿಸಿದರು.
ಇನ್ನೂ ಸೌಮ್ಯ ರೆಡ್ಡಿ ಮುಂದಿನ ಸಿಎಂ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಸಿದ್ದರಾಮಯ್ಯ ಸಹ ನಾನೇ ಮುಂದಿನ ಸಿಎಂ ಅಂತಾರೆ. ಕಾಂಗ್ರೆಸ್ನವರೇ ಅಥವಾ ಸೌಮ್ಯ ರೆಡ್ಡಿಯವರೇ ಹೇಳಬೇಕು, ಯಾರು ಸಿಎಂ ಆಗ್ತಾರೆ ಅಂತಾ ವ್ಯಂಗ್ಯವಾಡಿದರು.