ETV Bharat / state

ಕಾಂಗ್ರೆಸ್, ಜೆಡಿಎಸ್ ಅಪಪ್ರಚಾರವೇ ಅವರ ಸೋಲಿಗೆ ಕಾರಣ ..ಶೆಟ್ಟರ್ - Hubli Shetter News

ಉಪಚುನಾವಣೆಯ ಹನ್ನೆರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ತಮ್ಮ ಮನೆಯ ಮುಂದೆ ನೂರಾರು ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಭಾಗಿಯಾದ ಸಚಿವ ಶೆಟ್ಟರ್ ಅಭಿಪ್ರಾಯ ಹಂಚಿಕೊಂಡರು.

ಗೆಲುವಿನ ಸಂಭ್ರಮ ಆಚರಿಸಿದ ಶೆಟ್ಟರ್​
ಗೆಲುವಿನ ಸಂಭ್ರಮ ಆಚರಿಸಿದ ಶೆಟ್ಟರ್​
author img

By

Published : Dec 9, 2019, 6:08 PM IST

ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಹನ್ನೆರಡು ಸ್ಥಾನವನ್ನು ಪಡೆಯುವ ಮೂಲಕ ನಿರೀಕ್ಷಿತ ಫಲಿತಾಂಶವನ್ನು ಪಡೆದಿದೆ. ಕಾಂಗ್ರೆಸ್ ಜೆಡಿಎಸ್ ಅಪಪ್ರಚಾರ ಮಾಡಿದ್ದಕ್ಕೆ ಜನತೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಬಿಜೆಪಿಗೆ ನೈತಿಕತೆಯ ವಿಜಯ ಸಿಕ್ಕಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಅಪಪ್ರಚಾರವೇ ಅವರ ಸೋಲಿಗೆ ಕಾರಣ .ಶೆಟ್ಟರ್

ಉಪಚುನಾವಣೆಯ ಹನ್ನೆರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ತಮ್ಮ ಮನೆಯ ಮುಂದೆ ನೂರಾರು ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನಾದೇಶ ಸಿಕ್ಕಿದೆ, ಜನರು ಎಲ್ಲವನ್ನೂ ಪರಿಶೀಲಿಸಿ ಸ್ಥಿರ ಸರ್ಕಾರಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದ ಅವರು, ಎಲ್ಲ ಮತ ನೀಡಿದ ಜನತೆಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಕ್ಷೇತ್ರಗಳಲ್ಲಿ ಎರಡೆರಡು ಬಾರಿ ಪ್ರಚಾರ ಮಾಡಿದ್ದು, ಅವರ ಶ್ರಮಕ್ಕೆ ಬಂದಿರುವ ಪ್ರತಿಫಲವೇ ಹನ್ನೆರಡು ಕ್ಷೇತ್ರದ ಗೆಲುವಿಗೆ ಕಾರಣ ಎಂದರು.

ಅಥಣಿ ಕಾಗವಾಡ ಕ್ಷೇತ್ರದ ಜವಾಬ್ದಾರಿ ಕುರಿತು ಮಾತನಾಡಿದ ಅವರು, ನನಗೆ ಕಾಗವಾಡ ಅಥಣಿ ಭಾಗದಲ್ಲಿ ಜವಾಬ್ದಾರಿ ಕೊಟ್ಟಿದ್ದರು, ಅಲ್ಲಿಯೇ ಟಿಕಾಣಿ ಹೂಡಿ ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು, ಜನಾದೇಶ ಬಿಜೆಪಿ ಪರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Intro:HubliBody:ಸ್ಲಗ್:- ಕಾಂಗ್ರೆಸ್ ಜೆಡಿಎಸ್ ಅಪಪ್ರಚಾರ ಮಾಡಿದ್ದಕ್ಕೆ ಬಿಜೆಪಿಗೆ ಜನತೆ ಸ್ಪಷ್ಟ ಸಂದೇಶ ರವಾನೆ...ಶೆಟ್ಟರ್.

ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಹನ್ನೆರಡು ಸ್ಥಾನವನ್ನು ಪಡೆಯುವ ಮೂಲಕ ನಿರೀಕ್ಷಿತ ಫಲಿತಾಂಶವನ್ನು ಪಡೆದಿದೆ. ಕಾಂಗ್ರೆಸ್ ಜೆಡಿಎಸ್ ಅಪಪ್ರಚಾರ ಮಾಡಿದ್ದಕ್ಕೆ ಜನತೆ ಸ್ಪಷ್ಟ ಸಂದೇಶ ನೀಡಿದ್ದಾರೆ.ಬಿಜೆಪಿಗೆ ನೈತಿಕತೆಯ ವಿಜಯ ಸಿಕ್ಕಿದೆ. ಬಿಜೆಪಿ ಸುಭದ್ರ ಸರಕಾರ ನೀಡುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ವಿಧಾನಸಭಾ ಉಪಚುನಾವಣೆ ಹನ್ನೆರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ತಮ್ಮ ಮನೆಯ ಮುಂದೆ ನೂರಾರು ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನಾದೇಶ ಸಿಕ್ಕಿದೆ ಎಂದರು.
ಕಾಂಗ್ರೆಸ್ ಜೆಡಿಎಸ್ ಪಕ್ಷದವರು ಅಪಪ್ರಚಾರ ಮಾಡಿದ್ದರು.ಅವರ ಅಪಪ್ರಚಾರವೇ ಭಾರತೀಯ ಜನತಾ ಪಕ್ಷಕ್ಕೆ ಧನಾತ್ಮಕ ಪರಿಣಾಮ ಬೀರಿದ್ದು, ಜನರು ಎಲ್ಲವನ್ನೂ ಪರಿಶೀಲಿಸಿ ಸ್ಥಿರ ಸರ್ಕಾರಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದ ಅವರು,ಎಲ್ಲ ಮತಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು,ಎಲ್ಲ ಕ್ಷೇತ್ರಗಳಲ್ಲಿ ಎರಡೆರಡು ಬಾರಿ ಪ್ರಚಾರ ಮಾಡಿದ್ದಾರೆ.ಯಡಿಯೂರಪ್ಪ ಅವರ ಶ್ರಮಕ್ಕೆ ಬಂದಿರುವ ಪ್ರತಿಫಲವೇ ಹನ್ನೆರಡು ಕ್ಷೇತ್ರದ ಗೆಲುವಿಗೆ ಕಾರಣ ಎಂದು ಅವರು ಹೇಳಿದರು.
ಅಥಣಿ ಕಾಗವಾಡ ಕ್ಷೇತ್ರದ ಜವಾಬ್ದಾರಿ ಕುರಿತು ಮಾತನಾಡಿದ ಅವರು, ನನಗೆ ಕಾಗವಾಡ ಅಥಣಿ ಭಾಗದಲ್ಲಿ ಜವಾಬ್ದಾರಿ ಕೊಟ್ಟಿದ್ದರು. ಅಲ್ಲಿಯೇ ಟಿಕಾಣಿ ಹೂಡಿ ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು.ಜನಾದೇಶ ಬಿಜೆಪಿ ಪರವಾಗಿದೆ ಎಂದರು.
ಜೆಡಿಎಸ್ ಕಾಂಗ್ರೆಸ್ ಅಪ ಪ್ರಚಾರಕ್ಕೆ ಜನರೇ ತಕ್ಕ ಉತ್ತರ ನೀಡಿದ್ದಾರೆ.ಸಿದ್ದರಾಮಯ್ಯ ನೇತೃತ್ವದ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ.ಕಳೆದ ಸಮಾರಂಭದಲ್ಲಿ ನಾನು ಹೇಳಿದ್ದೇ ಸಿದ್ದರಾಮಯ್ಯ ಅವರು ಗೆಲ್ಲುವ ಬಗ್ಗೆ ಚಿಂತಿಸದೇ ವಿರೋಧ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು ಎಂದಿದ್ದೇ ಅದೇ ರೀತಿ ಮತದಾರರು ಅವರಿಗೆ ತಕ್ಕಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದರು.
ಜೆಡಿಎಸ್ ಕುಮಾರಸ್ವಾಮಿ ಅನರ್ಹ ಸೋಲಿಸುವುದು ನನ್ನ ಗುರಿ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಅಸ್ತಿತ್ವ ಎಲ್ಲಿಗೆ ಬಂದಿದೆ ಎಂದರೇ ಜಿರೋ ಸ್ಥಾನ ಪಡೆದುಕೊಂಡಿದ್ದಾರೆ. ನೈತಿಕತೆ ಬಗ್ಗೆ ಮಾತನಾಡುವ ಜೆಡಿಎಸ್ ಕಾಂಗ್ರೆಸ್ ಜನರ ಕ್ಷಮೆಯಾಚನೆ ಮಾಡಬೇಕು ಎಂದರು.
ಭಾರತೀಯ ಜನತಾ ಪಕ್ಷಕ್ಕೆ ನೈತಿಕತೆಯ ವಿಜಯ ಸಿಕ್ಕಿದೆ. ಸ್ಥಿರ ಸರ್ಕಾರಕ್ಕೆ ಜನರು ಆಶೀರ್ವಾದದ ಮೂಲಕ ಹನ್ನೆರಡು ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಿದ್ದಾರೆ.ಇನ್ನೂ ಮೂರು ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯ ಆಗದ ಹಾಗೆ' ಮತ್ತು ಸೋಲಿಗೆ ಕಾರಣ ಏನೆಂದು ತಿಳಿದುಕೊಂಡು ಮುಂದಿನ ದಿನಗಳಲ್ಲಿ' ಈ ರೀತಿಯಾಗದಂತೇ ನೋಡಿಕೊಳ್ಳಲಾಗುತ್ತೆ ಎಂದರು.ಇನ್ನೂ ಗೆಲವಿನ ಸಂಭ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು...

ಬೈಟ್:- ಜಗದೀಶ್ ಶೆಟ್ಟರ್ ( ರಾಜ್ಯ ಸಚಿವ್ರು)

_____________________________Conclusion:Yallappa
ETV Bharat Logo

Copyright © 2025 Ushodaya Enterprises Pvt. Ltd., All Rights Reserved.