ETV Bharat / state

ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ಗೆ ಸೈಡ್ ಎಫೆಕ್ಟ್ ಆಗುತ್ತದೆ: ಜಗದೀಶ್​ ಶೆಟ್ಟರ್

ಸಿದ್ದರಾಮೋತ್ಸವದಂತಹ ದೊಡ್ಡ ಸಮಾವೇಶಗಳು ಈ ಹಿಂದೆ ಅನೇಕ ಕಡೆ ನಡೆದಿವೆ. ಅದರಿಂದ ಬಿಜೆಪಿಗೆ ಯಾವುದೇ ತೊಂದರೆಯಾಗಿಲ್ಲ- ಜಗದೀಶ್ ಶೆಟ್ಟರ್​

Kn_hbl_05_jagadish_shetter_avb_7208089
ಜಗದೀಶ್​ ಶೆಟ್ಟರ್
author img

By

Published : Aug 6, 2022, 9:32 PM IST

ಹುಬ್ಬಳ್ಳಿ: ಸಿದ್ದರಾಮೋತ್ಸವದಿಂದ ಬಿಜೆಪಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಬದಲಿಗೆ​ ಅದು ಕಾಂಗ್ರೆಸ್​ಗೆ ಸೈಡ್ ಎಫೆಕ್ಟ್ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಂತಹ ಅನೇಕ ಸಮಾವೇಶಗಳು ಜರುಗಿದ್ದು, ಇದರಿಂದ ಭಾರತೀಯ ಜನತಾ ಪಾರ್ಟಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕಾಂಗ್ರೆಸ್​ ನಾಯಕರನ್ನು ಟಾರ್ಗೆಟ್​ ಮಾಡಿದೆ ಎಂಬ ಜಮೀರ್​ ಅಹಮದ್​ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ​ಜಮೀರ್ ಅಹ್ಮದ್ ಖಾನ್​ ಮತ್ತು ಡಿ.ಕೆ.ಶಿವಕುಮಾರ್​ ತಪ್ಪು ಮಾಡಿಲ್ಲ ಅಂದಮೇಲೆ ಹೆದರುವುದೇಕೆ? ಎಂದು ಪ್ರಶ್ನಿಸಿದರು.

ಜಗದೀಶ್​ ಶೆಟ್ಟರ್

ಬಳಿಕ ನ್ಯಾಷನಲ್​ ಹೆರಾಲ್ಡ್​ ಹಗರಣದ ಬಗ್ಗೆ ಮಾತನಾಡಿ, ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎನ್ನುವುದಾದರೆ ಕಾನೂನು ಹೋರಾಟ ಮಾಡಲಿ ಅದನ್ನೆಲ್ಲ ಬಿಟ್ಟು ಕಾಂಗ್ರೆಸ್​ ಪಕ್ಷದವರು ರಾಜಕೀಯ ಕಾರಣ ಹುಡುಕುವುದು ಬೇಡ ಎಂದರು.

ರಾಜ್ಯಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಬಗ್ಗೆ ಚರ್ಚೆ ಮಾಡಿ ಹೋಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ವಾರ್ಡ್ ಮೀಸಲಾತಿಗೆ ಕಾಂಗ್ರೆಸ್ ಗೂಂಡಾ ಸಂಸ್ಕೃತಿ : ಸಚಿವ ಅಶ್ವತ್ಥ ನಾರಾಯಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.