ETV Bharat / state

ನಾಳೆ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ, ಒಗ್ಗಟ್ಟು ಪ್ರದರ್ಶಿಸಿ.. ಸಚಿವ ಜಗದೀಶ್‌ ಶೆಟ್ಟರ್​ - ದೀಪ ಹಚ್ಚಲು ಸಚಿವ ಜಗದೀಶ್​ ಶೆಟ್ಟರ್​ ವಿನಂತಿ

ಪ್ರತಿಯೊಬ್ಬರು ಮನೆಯಲ್ಲಿಯೇ ಇರಬೇಕು. ಈಗಾಗಲೇ ಜನರ ಸಹಕಾರದಿಂದ ಲಾಕ್‌ಡೌನ್ ಯಶಸ್ವಿಯಾಗುತ್ತಿದೆ. ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ‌ ಕೊರೊನಾ ಸಾವು-ನೋವು ತುಂಬಾ ಕಡಿಮೆ.

Jagadish shettar talk on lockdown in Hubballi
ನಾಳೆ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ
author img

By

Published : Apr 4, 2020, 4:12 PM IST

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಲೈಟ್​ ಆಫ್ ಮಾಡಿ ದೀಪ ಹಚ್ಚಲು ಕರೆ ನೀಡಿದ್ದಾರೆ. ಅದನ್ನು ಎಲ್ಲರೂ ಸ್ವಯಂ ಪ್ರೇರಿತವಾಗಿ ಪಾಲನೆ ಮಾಡಿ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕೆಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸಚಿವ ಜಗದೀಶ್​ ಶೆಟ್ಟರ್​..

ಬಿಜೆಪಿ ಕಾರ್ಯಕರ್ತರು ನಗರದ ಬಡಜನರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು​, ದೇಶದ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ 21 ದಿನಗಳ ಲಾಕ್‌ಡೌನ್‌ನ ಕಟ್ಟುನಿಟ್ಟಾಗಿ ಎಲ್ಲರೂ ಪಾಲನೆ ಮಾಡಬೇಕು. ಪ್ರತಿಯೊಬ್ಬರು ಮನೆಯಲ್ಲಿಯೇ ಇರಬೇಕು. ಈಗಾಗಲೇ ಜನರ ಸಹಕಾರದಿಂದ ಲಾಕ್‌ಡೌನ್ ಯಶಸ್ವಿಯಾಗುತ್ತಿದೆ. ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ‌ ಕೊರೊನಾ ಸಾವು-ನೋವು ತುಂಬಾ ಕಡಿಮೆ.

ಹಾಗಾಗಿ ಈಗಾಗಲೇ ಸ್ವಯಂ ಮತ್ತು ಶಿಸ್ತನ್ನು ಏ.14ರವರೆಗೆ ಕಾಪಾಡಿಕೊಂಡು ದೇಶದ ಒಳಿತಿಗಾಗಿ ಶ್ರಮಿಸಬೇಕು. ಇದರಿಂದ ದೇಶದ ಪ್ರತಿಯೊಬ್ಬರಿಗೂ ಒಳ್ಳೆಯದು ಆಗುವುದು ಎಂದರು. ನಾಳೆ ರಾತ್ರಿ 9 ಗಂಟೆಗೆ ಎಲ್ಲರೂ ನಿಮ್ಮ ಮನೆ ಮುಂದೆ 9 ನಿಮಿಷಗಳ‌ ಕಾಲ ದೀಪ ಹಚ್ಚುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.