ETV Bharat / state

ಕನಕಪುರದ ಬಂಡೆಗೂ ಉಪ ಚುನಾವಣೆಯಲ್ಲಿ ಏನೂ ಮಾಡಲಿಕ್ಕೆ ಆಗಲಿಲ್ಲ; ಶೆಟ್ಟರ್​​ - By-Poll Result 2020

ಬಹನಿರೀಕ್ಷಿತ ಉಪಕದನ ಫಲಿತಾಂಶ ಹೊರಬಂದಿದ್ದು ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಕ್ಕೆ ಸಚಿವ ಜಗದೀಶ್ ಶೆಟ್ಟರ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಟಾಂಗ್ ನೀಡಿದ್ದಾರೆ.

Jagadish Shettar Reaction About By-Poll Result
ಸಚಿವ ಜಗದೀಶ್ ಶೆಟ್ಟರ್
author img

By

Published : Nov 10, 2020, 5:21 PM IST

Updated : Nov 10, 2020, 5:40 PM IST

ಹುಬ್ಬಳ್ಳಿ: ಶಿರಾ ಮತ್ತು ಆರ್.ಆರ್. ‌ನಗರದ ಕ್ಷೇತ್ರದ ಜನ ನಮ್ಮನ್ನ ಕೈಹಿಡಿದಿದ್ದಾರೆ. ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿ ತಂದಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಪಕ್ಷದ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ನಮ್ಮ ಹಾಗೂ ಪಕ್ಷದ ಅಭ್ಯರ್ಥಿಯ ಮೇಲೆ ಕರ್ನಾಟಕದ ಜನತೆಯ ಆಶೀರ್ವಾದವಿದೆ. ಬಿಹಾರದ ಚುನಾವಣೆಯ ಸಿ ವೋಟರ್ ಸಮೀಕ್ಷೆ ಮಹಾಘಟಬಂಧನ ಎಂದಿತ್ತು, ಈಗ ಅದು ಸುಳ್ಳಾಗಿದೆ. ಬಿಹಾರದ ಜನತೆ ಮೋದಿಯವರ ಮೇಲೆ ಇರುವ ವಿಶ್ವಾವನ್ನ ವ್ಯಕ್ತಪಡಿಸಿದ್ದಾರೆ.

ನಿತೀಶ್​ ಕುಮಾರ್​ ಅವರ ಜೊತೆ ನಾವಿದ್ದೇವೆಂದು ತೋರಿಸಿಕೊಟ್ಟಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದೆ. ಕೇಂದ್ರ ಸೇರಿದಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಅಧೋಗತಿಗೆ ಹೋಗುತ್ತಿದೆ ಎಂದರು.

ಸಚಿವ ಜಗದೀಶ್ ಶೆಟ್ಟರ್

ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಕಾಂಗ್ರೆಸ್ ಅ​ನ್ನು ಉದ್ಧಾರ ಮಾಡಲಿಕ್ಕೆ ಆಗುವುದಿಲ್ಲ. ಕನಕಪುರದ ಬಂಡೆಗೂ ಉಪ ಚುನಾವಣೆಯಲ್ಲಿ ಏನೂ ಮಾಡಲಿಕ್ಕೆ ಆಗಲಿಲ್ಲ. ಬಿಜೆಪಿ ಬಹಳಷ್ಟು ಬಲಾಢ್ಯವಾಗಿ ಬೆಳೆದಿದೆ. ಮೈಸೂರು ಭಾಗದಲ್ಲಿ ನಮಗೆ ಬೇಸ್ ಇಲ್ಲ. ಈಗ ನಮ್ಮ ಪಕ್ಷ ಅಲ್ಲಿಯೂ ಸ್ಟ್ರಾಂಗ್​ ಆಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಮೂರಾಬಟ್ಟೆ ಆಗುತ್ತಿದೆ ಎಂದು ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತಂದ ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದರು.

Last Updated : Nov 10, 2020, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.